ಮಂಗಳೂರಿನ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಮರದ ಬಳಿ ಭಾನುವಾರ ತಡರಾತ್ರಿ ಘಟನೆ ನಡೆದಿದೆ. ಬಾಡಿಗೆ ಮನೆಯಲ್ಲಿ ರಾತ್ರಿ ಮಲಗಿದ್ದ ತಮ್ಮ ಮಲ್ಲಿಕಾರ್ಜುನ (20) ಎಂಬಾತನ ತಲೆಗೆ ಕಲ್ಲು ಎತ್ತಿ ಹಾಕಿ, ಆತನ ಸ್ವಂತ ಅಣ್ಣ ಸೋಮನಾಥನೇ ಕೊಲೆ ಮಾಡಿದ್ದಾನೆ. ಮೃತನನ್ನು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತೆಗ್ಯಾಳು ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ಕೂಲಿಕಾರ್ಮಿಕರಾಗಿದ್ದು ಪರಸ್ಪರ ಜಗಳದ ನಡುವೆ ಈ ಕೊಲೆ ನಡೆದಿದೆ.