



ಇದೇ ಬರುವ ಆಗಸ್ಟ್ 13 ನೇ ತಾರೀಕಿಗೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಧುಮೇಹ (ಶುಗರ್) ತಪಾಸಣಾ ಶಿಬಿರ ಹಾಗೂ ಉಚಿತ ಫ್ಯಾಟಿ ಲಿವರ್ ತಪಾಸಣೆ (ಫೈಬ್ರೋ ಸ್ಕ್ಯಾನ್) ಹಾಗೂ ಉಚಿತ ಕಿವಿ ತಪಾಸಣಾ ಶಿಬಿರವು ಬೆಳಗ್ಗೆ 10:00 ರಿಂದ 12:30 ರ ತನಕ ನಡೆಯಲಿದೆ.ಶಿಬಿರದಲ್ಲಿ ಮಧುಮೇಹ ತಪಾಸಣೆಯ ಭಾಗವಾಗಿ HBA1ಸಿ ಟೆಸ್ಟ್ ದರದಲ್ಲಿ ವಿಶೇಷ ರಿಯಾಯಿತಿ ಕೂಡ ಇದೆ.ಸಾಮಾನ್ಯ ವೈದ್ಯಕೀಯ ತಜ್ಞರು ಮತ್ತು ಮಧುಮೇಹ ತಜ್ಞರು ಈ ಶಿಬಿರದಲ್ಲಿ ಸಂದರ್ಶಕ ವೈದ್ಯರುಗಳಾಗಿ ಸೇವೆ ಸಲ್ಲಿಸಲಿದ್ದಾರೆಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.




