ಜೆಸಿಐ ಸುಳ್ಯ ಪಯಸ್ವಿನಿ ಮತ್ತು ಪೋಲೀಸ್ ಇಲಾಖೆ ವತಿಯಿಂದ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ

ಜೇಸಿಐ ಸುಳ್ಯ ಪಯಸ್ವಿನಿ
ಹಾಗೂ ಸುಳ್ಯ ಪೊಲೀಸ್ ಇಲಾಖಾ ವತಿಯಿಂದ ಅಂತರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ-2026 ಪ್ರಯುಕ್ತ ಜೂನ್ 23ರಂದು ನೆಹರು ಸ್ಮಾರಕ ವಿದ್ಯಾಸಂಸ್ಥೆ ಅರಂತೋಡು ಇಲ್ಲಿನ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಾಗಾರವನ್ನು ಸುಳ್ಯ ಪೊಲೀಸ್ ಇಲಾಖೆಯ ಸಹಾಯಕ ಉಪ ನಿರೀಕ್ಷಕರಾದ ಶ್ರೀ. ತಾರನಾಥ್ ಹಾಗೂ ಪ್ರೋಭೇಷನರಿ ಸಹಾಯಕ ಉಪ ನಿರೀಕ್ಷಕರಾದ ಶ್ರೀ ಕೃಷ್ಣ ಜಿ. ಬಿ, ಯವರು ನಡೆಸಿಕೊಟ್ಟರು.


ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಜೇಸಿಐ ಸುಳ್ಯ ಪಯಸ್ವಿಯ ಅಧ್ಯಕ್ಷರಾದ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸಂತೋಷ್ ಕುತ್ತಮೊಟ್ಟೆ, ಪಾಪ್ಯುಲರ್ ಫ್ರಂಟ್ ಎಜ್ಯುಕೇಶನ್ ಸೊಸೈಟಿ ಇದರ ಸಂಚಾಲಕರಾದ ಶ್ರೀ ಅಬ್ದುಲ್ ಅರಂತೋಡು, ಕಾಲೇಜಿನ ಸಂಚಾಲಕರಾದ ಶ್ರೀ ಎ ಸಿ ವಸಂತ್, ಕಾಲೇಜಿನ ಪ್ರಾಂಶುಪಾಲರಾದ ಶ್ರೀ. ರಮೇಶ್ ಎಸ್ , ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ತಾರಾ ಮಾದವ ಚೂಂತಾರು ಹಾಗೂ ಕಾರ್ಯಕ್ರಮದ ಸಂಚಾಲಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ. ಸೋಮಶೇಖರ ಪಿ, ಇವರು ಅತಿಥಿಗಳನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕು. ಮೌಲ್ಯ ದ್ವಿತೀಯ ವಿಜ್ಞಾನ ವಿಭಾಗ ಪ್ರಾರ್ಥಿಸಿ, ಇತಿಹಾಸ ಉಪನ್ಯಾಸಕರಾದ ಜೇಸಿ. ಮೋಹನ್ ಚಂದ್ರ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕರಾದ ಶ್ರೀ. ಪದ್ಮಕುಮಾರ್ ವಂದಿಸಿದರು.

Leave a Reply

Discover more from

Subscribe now to keep reading and get access to the full archive.

Continue reading