ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ: ಸುಳ್ಯದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಮುಖಂಡರ ಭಾಗಿ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಳ್ಯದಲ್ಲಿ ಇಂದು ನಡೆದ ಮಹತ್ವದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಂಪಾಜೆ ವಲಯ ಕಾಂಗ್ರೆಸ್ ಘಟಕದ ನಾಯಕರು ಹಾಗೂ ಕಾರ್ಯಕರ್ತರು ಪ್ರಮುಖವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಪಕ್ಷದ ಹೈಕಮಾಂಡ್ ಸೂಚನೆಯಂತೆ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಅಭಿಪ್ರಾಯ ಸಂಗ್ರಹಿಸಲು ಆಗಮಿಸಿದ್ದ ಕ್ಯಾಲಿಕಟ್ ಶಾಸಕರು ಸೇರಿದಂತೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಕಾಂಗ್ರೆಸ್ ವೀಕ್ಷಕರನ್ನು ಸಂಪಾಜೆ ವಲಯದ ನಿಯೋಗವು ಭೇಟಿಯಾಯಿತು. ಈ ವೇಳೆ ಪಕ್ಷದ ಸಂಘಟನೆ, ಮುಂದಿನ ರಾಜಕೀಯ ಹೆಜ್ಜೆಗಳು ಹಾಗೂ ಸ್ಥಳೀಯ ಕಾರ್ಯಕರ್ತರ ಒಲವಿನ ಕುರಿತು ವಿವರವಾದ ಚರ್ಚೆ ನಡೆಸಲಾಯಿತು.

ಕೆ.ಪಿ. ಜಾನಿ, ಮಹಮ್ಮದ್ ಕುಂಞಿ ಗೂನಡ್ಕ, ಅಬೂಸಾಲಿ, ಸವಾದ್ ಗೂನಡ್ಕ, ವಸಂತ ಪೆಲ್ತಡ್ಕ, ಎ.ಕೆ. ಇಬ್ರಾಹಿಮ್ ಪ್ರಮೀಳಾ ಪೆಲ್ತಡ್ಕ, ಲಲನ ಕೆ.ಆರ್., ಜ್ಞಾನಶೀಲನ್, ಬೆಂಜಮಿನ್  ಸಾಜಿದ್   ಮತ್ತು ಇತರರು ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಉಪಸ್ಥಿತರಿದ್ದರು.

ಮುಂಬರುವ ದಿನಗಳಲ್ಲಿ ಪಕ್ಷವನ್ನು ಕೆಳಮಟ್ಟದಿಂದ ಬಲಪಡಿಸುವ ನಿಟ್ಟಿನಲ್ಲಿ ಸೂಕ್ತ ಹಾಗೂ ಕ್ರಿಯಾಶೀಲ ನಾಯಕತ್ವಕ್ಕೆ ಆದ್ಯತೆ ನೀಡಬೇಕೆಂದು ಸಂಪಾಜೆ ವಲಯ ನಾಯಕರು ವೀಕ್ಷಕರಲ್ಲಿ ವಿನಂತಿಸಿದರು.

Leave a Reply

Discover more from

Subscribe now to keep reading and get access to the full archive.

Continue reading