ಸಾಕಾರ ನ್ಯೂಸ್: ಜಯನಗರದ ಜನ್ನತುಲ್ ಉಲೂಮ್ ಮಸೀದಿಯಲ್ಲಿ ಪ್ರತಿ ತಿಂಗಳು ಜರುಗುವ ಮಾಸಿಕ ಅಜ್ಮೀರ್ ಮೌಲಿದ್ ಪುಣ್ಯ ಕಾರ್ಯಕ್ರಮವು ಇದೇ ಬರುವ ಜೂನ್ 28 ರಂದು ಮಸೀದಿ ವಠಾರದಲ್ಲಿ ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮದ ನೇತೃತ್ವವನ್ನು ಪ್ರಮುಖ ವಿದ್ವಾಂಸರು ಮೊಗರ್ಪಣೆ ಮುದರ್ರಿಸರಾದ ಮುದುಗುಡ ಅಬ್ದುಲ್ ಖಾದರ್ ಸಖಾಫಿ ಅವರು ವಹಿಸಲಿದ್ದು, ಮೌಲಿದ್ ಪಾರಾಯಣ ಹಾಗೂ ಪ್ರವಚನಗಳನ್ನು ನಡೆಸಿಕೊಡಲಿದ್ದಾರೆ.

ಕಾರ್ಯಕ್ರಮದಲ್ಲಿ ದುಆ ವನ್ನು ಜಯನಗರದ ಪ್ರಮುಖ ಸಾದಾತ್ ಝೈನುಲ್ ಅಬಿದೀನ್ ತಂಙಳ್ ಅವರು ನೆರವೇರಿಸಲಿದ್ದಾರೆ.
ಇದೇ ವೇಳೆ ಜಯನಗರ ಜುಮಾ ಮಸೀದಿಯ ಗೌರವಾನ್ವಿತ ಇಮಾಮರಾದ ಶಫೀಕ್ ಹಿಮಮಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಉಪಸ್ಥಿತರಿರಲಿದ್ದಾರೆ.

ಈ ಧಾರ್ಮಿಕ ಸಭೆಯಲ್ಲಿ ಜಯನಗರ ಹಾಗೂ ಸುತ್ತಮುತ್ತಲಿನ ಪರಿಸರದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಬರ್ರುಕ್ ಸ್ವೀಕರಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮಸೀದಿ ಕಮಿಟಿ ಹಾಗೂ ಸಂಘಟಕರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.






