ಸುಳ್ಯ ತಾಲೂಕಿನ ಕಡೇರ ನಿವಾಸಿಯಾದ, ವೆಲ್ಡಿಂಗ್ ಕೆಲಸ ಮಾಡುವ ವಸಂತ ಎಂಬವರ ಮಕ್ಕಳಾದ ಜಶ್ವಿನ್ ಹಾಗೂ ಜಶ್ವಿತ್ ಎಂಬ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ಐದು ವರ್ಷ ಪ್ರಾಯದ ಈ ಇಬ್ಬರು ಮಕ್ಕಳು ಮುರುಳ್ಯ ಶಾಂತಿನಗರ ಶಾಲೆಯ ಯು.ಕೆ.ಜಿ ವಿದ್ಯಾರ್ಥಿಗಳಾಗಿದ್ದರು.
ಸಂಜೆ ವೇಳೆ ಮನೆಯ ಸಮೀಪದಲ್ಲೇ ಆಟವಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಬ್ಬರು ಆಕಸ್ಮಿಕವಾಗಿ ಹತ್ತಿರದಲ್ಲೇ ಇದ್ದ ಕೆರೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆಯೇ ಸುಳ್ಯದಿಂದ ಅಗ್ನಿಶಾಮಕ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಕೆರೆಯಿಂದ ಮಕ್ಕಳ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದೆ. ಮುದ್ದಾದ ಇಬ್ಬರು ಮಕ್ಕಳ ಅಗಲಿಕೆಯಿಂದ ಸ್ಥಳದಲ್ಲಿ ಶೋಕಾವೃತ ವಾತಾವರಣ ನಿರ್ಮಾಣವಾಗಿದೆ.

