ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಗೆ ಕೀರ್ತಿ ತಂದ ಹಿರಿಯ ವಿದ್ಯಾರ್ಥಿ ಅಹಮ್ಮದ್ ಅಶ್ಪಾಕ್ ಗೂನಡ್ಕ.

ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಜಿ ಕೆ ಹಮೀದ್ ಮತ್ತು ಆಯಿಷಾ ಈ ದಂಪತಿಗಳ ಸುಪುತ್ರ ಅಹಮ್ಮದ್ ಅಶ್ಪಾಕ್ ಇವರು LKG-10 ನೇ ತರಗತಿಯವರೆಗೆ ತೆಕ್ಕಿಲ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡಿದ ಪ್ರತಿಭಾವಂತ ವಿದ್ಯಾರ್ಥಿ ಇಂದು, ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ CMA USA (Certified Management Accountant) ಪದವಿಯನ್ನು ಪಡೆಯುವ ಮೂಲಕ ಹೆತ್ತವರಿಗೆ, ಶಾಲೆಗೆ ಹಾಗೂ ಗ್ರಾಮಸ್ಥರಿಗೆ ಹೆಮ್ಮೆ ತಂದಿರುತ್ತಾರೆ.
ಇವರಿಗೆ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್, ಆಡಳಿತಾಧಿಕಾರಿಗಳ ಅಬ್ದುಲ್ಲಾ ಮಾಸ್ಟರ್ (ನಿವೃತ್ತ ಉಪನ್ಯಾಸಕರು, ಅರಂತೋಡು). ಶಾಲೆಯ ಮುಖ್ಯೋಪಾಧ್ಯಾಯರಾದ ಸಂಪತ್ ಜೆ ಡಿ ಹಾಗೂ ಶಿಕ್ಷಕ ವೃಂದದವರು, ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಹಾಗೂ ಸರ್ವ ಸದಸ್ಯರಿಂದ ಹೃದಯಸ್ಪರ್ಶಿ ಅಭಿನಂದನೆಗಳನ್ನು ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading