ಇಂದು ಸಂಪಾಜೆ ವಲಯ ಕಾಂಗ್ರೆಸ್ ನ ನಿಯೋಗವು ಸಂಪಾಜೆಯ ಪಕ್ಷದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾಗಲು ಹೋದ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಕೆ.ಹನೀಫ್ ಅವರನ್ನು ಹಾಗೂ ಸಂಪಾಜೆ ಗ್ರಾಮದಲ್ಲಿ ಪಕ್ಷದ ಬಿ.ಎಲ್.ಒ.ಗಳ ನೇಮಕಾತಿಯನ್ನು ನನ್ನ ಮಾತಿನ ಪ್ರಕಾರ ಮಾಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಾಧಾಕೃಷ್ಣ ಬೊಳ್ಳೂರು ಅವರು ನಿಯೋಗಕ್ಕೆ ಸುಳ್ಳು ಮಾಹಿತಿಯನ್ನು ನೀಡಿದ್ದು, ಇದು ಸರಿಯಲ್ಲ, ಎಸ್.ಕೆ.ಹನೀಫ್ ಅವರ ನೇಮಕಾತಿ ಹಾಗೂ ಸಂಪಾಜೆಯಲ್ಲಿ ಪಕ್ಷದ ಬಿ.ಎಲ್.ಎ.ಗಳ ನೇಮಕಾತಿಯಲ್ಲಿ ನನ್ನ ಯಾವುದೇ ಪಾತ್ರವಿಲ್ಲ.ಜವಾಬ್ದಾರಿಯುತ ಸ್ಥಾನದಲ್ಲಿರುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಈ ರೀತಿ ಕಾರ್ಯಕರ್ತರಿಗೆ ಸುಳ್ಳು ಮಾಹಿತಿಯನ್ನು ನೀಡಿ ಗೊಂದಲವುಂಟು ಮಾಡಬಾರದು, ಅವರು ಪಕ್ಷವನ್ನು ಕಟ್ಟುವ ಕೆಲಸ ಮಾಡಲಿ ಎಂದು ಕೆ.ಪಿ.ಸಿ.ಸಿ.ಮಾಜಿ ವಕ್ತಾರರಾದ ಶೌವಾದ್ ಗೂನಡ್ಕರವರು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆಯನ್ನು ನೀಡಿರುತ್ತಾರೆ.






