



ಎಲಿಮಲೆ: ಇಲ್ಲಿನ ಅಬ್ದುಲ್ ರಿಯಾಜ್ ಜುಮಾ ಮಸೀದಿಯಲ್ಲಿ ಪ್ರತಿ ತಿಂಗಳು ಎಲಿಮಲೆ ತಂಙಳ್ ರ ನೇತೃತ್ವದಲ್ಲಿ ಸಂಭ್ರಮದಿಂದ ನಡೆಸಿಕೊಂಡು ಬರಲಾಗುತ್ತಿರುವ ಮಾಸಿಕ ಸ್ವಲಾತ್ ಕಾರ್ಯಕ್ರಮವು ನಾಳೆ (ಆಗಸ್ಟ್ 7, 2026, ಶುಕ್ರವಾರ) ಮಗರಿಬ್ ನಮಾಜಿನ ನಂತರ ನಡೆಯಲಿದೆ.
ಸದರಿ ಕಾರ್ಯಕ್ರಮವು ಗೌರವಾನ್ವಿತರಾದ ಸೈಯದ್ ಮುಹ್ಸಿನ್ ಸೈಯದ್ ಅಲವಿ ಕೋಯ ತಂಙಳ್ ಎಲಿಮಲೆ ರವರ ಗಣ್ಯ ಉಪಸ್ಥಿತಿಯಲ್ಲಿ ಜರುಗಲಿದ್ದು, ಗುತ್ತಿಗಾರಿನ ಖತೀಬರಾದ ಬಹುಮಾನ್ಯ ಸುಲೈಮಾನ್ ಸಅದಿ ಉಸ್ತಾದರು ಪ್ರಭಾಷಣ ನೀಡಲಿದ್ದಾರೆ. ತದನಂತರ ಸ್ವಲಾತ್ ಮಜ್ಲಿಸ್ ಸಮಾಪ್ತಿಗೊಳ್ಳಲಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮಸೀದಿ ಆಡಳಿತ ಮಂಡಳಿ ಹಾಗೂ ಸಂಘಟಕರು ವಿನಂತಿಸಿಕೊಂಡಿದ್ದಾರೆ.



