ಸಂಪಾಜೆ ಸಮೀಪದ ಗೂನಡ್ಕದಲ್ಲಿರುವ ಶ್ರೀ ಶಿರಾಡಿ ರಾಜನ್ ದೈವ ಬೈಲಿನಲ್ಲಿ ಪತ್ತನಾಜೆ ನೇಮೋತ್ಸವವು 2026ರ ಮೇ 25 ಮತ್ತು 26 ರಂದು ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಸೋಮವಾರ ಮತ್ತು ಮಂಗಳವಾರದಂದು ಜರುಗಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಡಳಿತ ಸಮಿತಿಯು ಕೋರಿದೆ.


ಈ ಕಾರ್ಯಕ್ರಮದ ಯಶಸ್ಸಿಗಾಗಿ ಕುಳವಾರು ಮನೆ ವಂತಿಗೆ ಹಾಗೂ ಕುಳವಾರು ವ್ಯಾಪ್ತಿಯ ಪ್ರತಿಯೊಂದು ಮನೆಯಿಂದ 500 ರೂಪಾಯಿಗಳ ವಂತಿಗೆಯನ್ನು ಸಂಗ್ರಹಿಸಲಾಗುತ್ತಿದ್ದು, ಭಕ್ತರು ಈ ಧಾರ್ಮಿಕ ಕಾರ್ಯದಲ್ಲಿ ಕೈಜೋಡಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿರಾಡಿ ರಾಜನ್ ದೈವ ಬೈಲೆ ಆಡಳಿತ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


