ಕುಕ್ಕುಜಡ್ಕದಲಿ ಆಲ್ಟೋ ಮತ್ತು ಡಸ್ಟರ್ ಮುಖಾಮುಖಿ ಡಿಕ್ಕಿ

ಸುಳ್ಯ: ಇಲ್ಲಿನ ಕುಕ್ಕುಜಡ್ಕ ಸಮೀಪದ ಚೆನ್ನಪರಿ ಎಂಬಲ್ಲಿ ಇಂದು ಬೆಳಿಗ್ಗೆ  ರಸ್ತೆ ಅಪಘಾತವೊಂದು ಸಂಭವಿಸಿದ್ದು, ಡಸ್ಟರ್ ಮತ್ತು ಆಲ್ಟೋ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಇಂದು ಬೆಳಿಗ್ಗೆ ಸುಮಾರು 11:45ರ ವೇಳೆಗೆ ಈ ಘಟನೆ ನಡೆದಿದೆ. ಸುಳ್ಯದಿಂದ ಕುಕ್ಕುಜಡ್ಕ ಕಡೆಗೆ ಚಲಿಸುತ್ತಿದ್ದ ಡಸ್ಟರ್ ಕಾರು ಹಾಗೂ ಕುಕ್ಕುಜಡ್ಕದಿಂದ ಸುಳ್ಯದ ಕಡೆಗೆ ಬರುತ್ತಿದ್ದ ಆಲ್ಟೋ ಕಾರಿನ ನಡುವೆ ಚೆನ್ನಪರಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ.

ಎರಡೂ ವಾಹನಗಳು  ಮುಖಾಮುಖಿ ಡಿಕ್ಕಿಯ ರಭಸಕ್ಕೆ ಕಾರುಗಳು ಜಖಂಗೊಂಡಿವೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಗೊಂಡವರ ವಿವರ ಹಾಗೂ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

 

Leave a Reply

Discover more from

Subscribe now to keep reading and get access to the full archive.

Continue reading