ಕೊಡಂಕೇರಿ ಸ್ವಾಮಿ ಕೊರಗಜ್ಜ ದೈವಸ್ಥಾನದಲಿ ಮೇ 15ರಂದು ಅಗೇಲು ಸೇವೆ

ಅರಂತೋಡು ಕೊಡಂಕೇರಿಯ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ 2026ರ ಮೇ 15ರಂದು ವೃಷಭ ಸಂಕ್ರಮಣದ ಪ್ರಯುಕ್ತ ದೈವದ ಅಗೇಲು ಸೇವೆಯನ್ನು ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮವು ಅಂದು ರಾತ್ರಿ 7 ಗಂಟೆಗೆ ನಡೆಯಲಿದ್ದು, ಅದರ ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ಇರಲಿದೆ.

ಈ ಸೇವೆಯನ್ನು ಮಾಡಿಸಲು ಇಚ್ಛಿಸುವ ಭಕ್ತರು ಒಂದು ದಿನ ಮುಂಚಿತವಾಗಿ ದೈವಸ್ಥಾನಕ್ಕೆ ತಿಳಿಸಬೇಕೆಂದು ವಿನಂತಿಸಲಾಗಿದೆ. ಹೆಚ್ಚಿನ ವಿವರಗಳನ್ನು ಪಡೆಯಲು ಆಸಕ್ತರು 7022077809 ಸಂಖ್ಯೆಯನ್ನು ಸಂಪರ್ಕಿಸಬಹುದು.

Leave a Reply

Discover more from

Subscribe now to keep reading and get access to the full archive.

Continue reading