ಜುಲೈ 18ರಂದು ಅನುಮಾನಾಸ್ಪದವಾಗಿ ಸಾವಿಗೀಡಾದ ಸಂಪಾಜೆ ಗ್ರಾಮದ ಕಡೆಪಾಲ ಆಲಿಗುಡ್ಡೆಯ ಫಾತಿಮತ್ ನಿಶಾನ ಕೊಲೆ ಪ್ರಕರಣದ ಆರೋಪಿ ಅಲವಿಯವರ ಮನೆಗೆ ಕಳ್ಳರು ಕನ್ನ ಹಾಕಲು ಯತ್ನಿಸಿ ಬರಿಗೈಯಲ್ಲಿ ವಾಪಸ್ ಆಗಿರುವಟನೆ ವರದಿಯಾಗಿದೆ.
ಕಳ್ಳತನಕ್ಕೆ ಮನೆಯ ಹಿಂಬದಿಯ ಗ್ರಿಲ್ ಮುರಿದು ಒಳಹೋಗಿ ಪ್ರಯತ್ನಿಸಲಾಗಿದೆ. ಮನೆಯೊಳಗೆ ಹೋಗಿ ಕಳ್ಳತನಕ್ಕೆ ಪ್ರಯತ್ನಿಸಿದವರಿಗೆ ಏನೂ ಸಿಕ್ಕಿಲ್ಲ. ಅಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಕುಟುಂಬಕ್ಕೆ ಸಂಬಂಧಪಟ್ಟವರು ಸುರಕ್ಷಿತವಾಗಿ ಮೊದಲೇ ಇರಿಸಿದ್ದರು. ಬಟ್ಟೆಗಳನ್ನೆಲ್ಲ ಚೆಲ್ಲಾಡಿದ ಕಳ್ಳರು ವಾಪಸ್ ಅಲ್ಲಿಂದ ತೆರಳಿದ್ದಾರೆ.
ಇಬ್ರಾಹಿಂ s/o ಆಫ್ ಅಬ್ದುಲ್ ರೆಹಮಾನ್ ನೀಡಿದ ದೂರಿನ ಮೇಲೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.









