ಕನ್ನಡ ಸೀರಿಯಲ್ ರಂಗದಲ್ಲಿ ಸೂಪರ್ ಸ್ಟಾರ್ ಎಂಬಂತೆ ಮೆರೆದಿದ್ದ ಇತ್ತೀಚಿನದಿನಗಳಲ್ಲಿ ಹಿಟ್ಲರ್ ಕಲ್ಯಾಣ ಎಂಬ ಸೀರಿಯಲ್ ನ ಪ್ರಮುಖ ಪಾತ್ರ ನಿಭಾಯಿಸಿದ್ದ ಮತ್ತು ಸಿನಿಮಾ ರಂಗದಲ್ಲೂ ಭರವಸೆ ಮೂಡಿಸಿದ್ದ ದಿಲೀಪ್ ರಾಜ್ ಅವರು ನಿಧನರಾಗಿದ್ದಾರೆ.

ಅವರಿಗೆ 47 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿಯಾದ ಲವ್ ಮಾಕ್ಟೇಲ್ 3 ಚಿತ್ರದಲ್ಲಿ ಲಾಯರ್ ಪಾತ್ರದಲ್ಲಿ ಮಿಂಚಿದ್ದರು. ಹಲವು ಕನ್ನಡ ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದ ಅದ್ಭುತ ನಟನಾ ಪ್ರತಿಭೆಯೊಂದು ಹಠಾತ್ ಮರೆಯಾಗಿದೆ.
ದಿಲೀಪ್ ರಾಜ್ ಜನನ 2-ಸೆಪ್ಟೆಂಬರ್-1978 ಮರಣ13-ಮೇ-2026
ನಟ ಮತ್ತು ನಿರ್ಮಾಪಕರಾಗಿ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಮನೆಮಾತಾಗಿದ್ದ ದಿಲೀಪ್ ರಾಜ್ ಚಲನಚಿತ್ರಗಳ ಪಟ್ಟಿ ಇಲ್ಲಿದೆ:
ಚಲನಚಿತ್ರಗಳು
ಬಾಯ್‌ಫ್ರೆಂಡ್ (2005): ಚಿತ್ರರಂಗಕ್ಕೆ ಪಾದಾರ್ಪಣೆ
ಮಿಲನ (2007): ಪುನೀತ್ ರಾಜ್‌ಕುಮಾರ್ ಎದುರು ನೆಗೆಟಿವ್ ಶೇಡ್‌ನಲ್ಲಿ ಗಮನಾರ್ಹ ನಟನೆ.
ಲವ್ ಗುರು: ಜನಪ್ರಿಯ ಚಿತ್ರ.
ಗಾನ ಬಜಾನ: ಕಾಮಿಡಿ ಮತ್ತು ಲವ್ ಸ್ಟೋರಿ.
ಯೂಟರ್ನ್ (U-Turn): ವಿಮರ್ಶಾತ್ಮಕವಾಗಿ ಪ್ರಶಂಸೆ ಪಡೆದ ಚಿತ್ರ.
ಅಂಬಿ ನಿಂಗ್ ವಯಸ್ಸಾಯ್ತೋ: ಕಿಚ್ಚ ಸುದೀಪ್ ಮತ್ತು ಅಂಬರೀಶ್ ಅವರೊಂದಿಗೆ ನಟನೆ.
ಲವ್ ಮಾಕ್ಟೇಲ್-3 (2026): ಲಾಯರ್ ಪಾತ್ರದಲ್ಲಿ ಅವರ ಕೊನೆಯ ಚಿತ್ರಗಳಲ್ಲಿ ಒಂದು.
ಇತರ ಚಿತ್ರಗಳು: 7 ಓ ಕ್ಲಾಕ್, ನೀನೇ ನೀನೇ, ಬರ್ಫಿ, ಟೋನಿ, ಆರ್ಕೆಸ್ಟ್ರಾ ಮೈಸೂರು, ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು.


