ತನ್ನ ಮುಗ್ಧ ಹಾಸ್ಯಾಭಿನಯದ ಮೂಲಕ ಜನರ ಮನಸ್ಸನ್ನು ಸೂರೆಗೊಂಡಿದ್ದ ಮತ್ತು ಆದಮಿಂಡೆ ಮಗಮ್ ಅಬು ಎಂಬ ಚಲನಚಿತ್ರದಲ್ಲಿ ನಟನೆಯ ಮತ್ತೊಂದು ಮಗ್ಗುಲನು ಪರಿಚಯಿಸಿ ರಾಷ್ಟ್ರ ಪ್ರಶಸ್ತಿ ವಿಜೇತರಾದ ಸಲೀಮ್ ಕುಮಾರ್ ಕೊನೆಯುಸಿರೆಳೆದಿದ್ದಾರೆ.

ತನ್ನ ಹಾಸ್ಯ ಪಾತ್ರದ ಮೂಲಕ ಸಿನೆಮವನ್ನು ಜನರಿಗೆ ಆಪ್ತ ಎನಿಸುವಂತೆ ಮುನ್ನಡೆಸುತ್ತಿದ್ದ ಸಲೀಮ್ ಕುಮಾರ್ ಇತ್ತೀಚೆಗಷ್ಟೇ ರೂಪುಗೊಂಡ ವಿಡಿ ಸತೀಶನ್ ನೇತೃತ್ವದ ಕೇರಳ ಸರಕಾರದ ಫಿಲಂ ಚೇಂಬರ್ ನ ಅಧ್ಯಕ್ಷ ಆಗುವುದಕ್ಕೆ ಉತ್ಸುಕರಾಗಿದ್ದರು.

ಆದರೆ ದಡೀರ್ ಕಾಣಿಸಿಕೊಂಡ ಅನಾರೋಗ್ಯದ ಕಾರಣ ನಿನ್ನೆಯಷ್ಟೇ ಆಸ್ಪತ್ರೆಯ ಐಸಿಯು ಗೆ ದಾಖಲಾಗಿದ್ದ ಸಲೀಮ್ ಕುಮಾರ್ ತಡರಾತ್ರಿ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.


