ಹಳೆ ವಿದ್ಯಾರ್ಥಿ ಸಂಘ(ರಿ) ಮೊಗರ್ಪಣೆ ವತಿಯಿಂದ ಎಮ್ಮೆಮಾಡು ಉರೂಸ್ ಗೆ ತರಳುತ್ತಿರುವ ಯಾತ್ರಾರ್ಥಿಗಳಿಗೆ ತಂಪುಪಾನೀಯ ವಿತರಣೆ ಈದಿನ ಅಂದರೆ ದಿನಾಂಕ 20 ಎಪ್ರಿಲ್ 2026 ರಂದು ನಡೆಯುತ್ತಿದೆ . ಎಮ್ಮೆಮಾಡಿನ ಉರೂಸ್ ಪ್ರಯುಕ್ತ ಅನ್ನದಾನದ ದಿನವಾದ ಇಂದು ಸುಳ್ಯ ಮಾರ್ಗವಾಗಿ ಸಾಗುವ ಪ್ರತಿಯೊಬ್ಬ ಯಾತ್ರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ. ಅದು ಇಡೀ ದಿನ ಮುಂದುವರೆಯಲಿದೆ.
ಇದರ ಉದ್ಘಾಟನೆ ವೇಳೆ ಹಳೆ ವಿದ್ಯಾರ್ಥಿ ಸಂಘ ಮೊಗರ್ಪಣೆ ಇದರ ಅಧ್ಯಕ್ಷರಾದ ಹನೀಫ್ ಸಂಗಮ್, ಬಶೀರ್, ಹನೀಪ್ ಪೊಸೋಟ್, ಹಾರಿಸ್, ಬದ್ರುದ್ದೀನ್, ಅಪ್ರೀದ್ ಅಪ್ಪಿ, ನವಾಜ್ ಪಂಡಿತ್ ಹೀಗೇ ಊರ ಪ್ರಮುಖರು ಉಪಸ್ಥಿತರಿದ್ದರು.









