ಅರಂತೋಡು: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಗೋಪಾಲಕೃಷ್ಣ ಬನ ಅವರು ಚುನಾವಣಾ ಅಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಧನಂಜಯ ಮೇರ್ಕಜೆ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.
ಶಾಲಾ ನಾಯಕಿಯಾಗಿ 7ನೇ ತರಗತಿಯ ಹಯಾ ಮರಿಯಂ ಹಾಗೂ ಉಪ ನಾಯಕಿಯರಾಗಿ 6ನೇ ತರಗತಿಯ ಗಾನ್ಯ ಡಿ.ಸಿ ಮತ್ತು ಸಿಂಚನ ಆಯ್ಕೆಯಾದರು. ಗೃಹ ಮಂತ್ರಿಯಾಗಿ ಚೇತನ್ ಕುಮಾರ್, ಉಪಗ್ರಹ ಮಂತ್ರಿಗಳಾಗಿ ಲೇಖನ್ ಮತ್ತು ವೇದಿತಾ ಜವಾಬ್ದಾರಿ ವಹಿಸಿಕೊಂಡರು. ಆರೋಗ್ಯ ಮಂತ್ರಿಯಾಗಿ ಮಾನ್ವಿ ಎಸ್.ಪಿ, ಉಪ ಆರೋಗ್ಯಮಂತ್ರಿಗಳಾಗಿ ತೃಷ ಮತ್ತು ಮನ್ವಿ ಆಯ್ಕೆಯಾದರು. ವಾರ್ತಾ ಮಂತ್ರಿಯಾಗಿ ವರ್ಷಾ ಹಾಗೂ ಉಪ ವಾರ್ತಾ ಮಂತ್ರಿಗಳಾಗಿ ತೃಷಾ ಮತ್ತು ಅನುಶ್ರೀ ನಿಯೋಜನೆಗೊಂಡರು. ಕ್ರೀಡಾ ಮಂತ್ರಿಯಾಗಿ ಮಂಜುನಾಥ್, ಉಪ ಕ್ರೀಡಾ ಮಂತ್ರಿಗಳಾಗಿ ಆಕಾಶ್ ಮತ್ತು ತರುಣ್ ಕಾರ್ಯನಿರ್ವಹಿಸಲಿದ್ದಾರೆ.
ತೋಟಗಾರಿಕಾ ಮಂತ್ರಿಯಾಗಿ ತನುಷ್, ಉಪ ತೋಟಗಾರಿಕಾ ಮಂತ್ರಿಗಳಾಗಿ ಸಾನ್ವಿಕ್ ಮತ್ತು ಮಯೂರ ಕೃಷ್ಣ, ನೀರಾವರಿ ಮಂತ್ರಿಯಾಗಿ ಲಿಖಿತ ಹಾಗೂ ಉಪ ನೀರಾವರಿ ಮಂತ್ರಿಗಳಾಗಿ ಸುಪ್ರಿಯ ಮತ್ತು ರಕ್ಷಾ ಆಯ್ಕೆಯಾದರು. ಶಿಸ್ತು ಮಂತ್ರಿಯಾಗಿ ದಿಶಾನ್, ಉಪ ಶಿಸ್ತು ಮಂತ್ರಿಗಳಾಗಿ ಕಾರ್ತಿಕ್ ಮತ್ತು ವಿಶ್ಮಿತಾ, ಸ್ವಚ್ಛತಾ ಮಂತ್ರಿಯಾಗಿ ತೃಷಾ ಎ.ಎಂ ಹಾಗೂ ಉಪ ಸ್ವಚ್ಛತಾ ಮಂತ್ರಿಗಳಾಗಿ ವಿಶ್ಮಿತಾ, ಪ್ರಿಯಾಂಕ ಮತ್ತು ಸಾನ್ವಿ ಜವಾಬ್ದಾರಿ ಪಡೆದರು. ಇನ್ನು ವಿರೋಧ ಪಕ್ಷದ ನಾಯಕನಾಗಿ ರಿಶಾಂಕ್ ಹಾಗೂ ಉಪನಾಯಕರಾಗಿ ಚಿಂತನ್ ಮತ್ತು ಪ್ರನ್ವಿ ಅವರನ್ನು ಆರಿಸಲಾಯಿತು.

ಶಾಲಾ ಸಂಸತ್ತಿನ ಈ ಪ್ರಕ್ರಿಯೆಯಲ್ಲಿ ಶಾಲೆಯ ಸಹ ಶಿಕ್ಷಕರಾದ ಭಾನುಮತಿ, ರೇಶ್ಮಾ, ಗೀತಾ ಕುಮಾರಿ, ಶಕುಂತಳಾ, ಬುಶ್ರಾ ಮತ್ತು ಲಿಖಿತಾ ಅವರು ಸಹಕರಿಸಿದರು. ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ಸಂಸತ್ತಿಗೆ ಶಾಲಾ ವೃಂದದವರು ಶುಭ ಹಾರೈಸಿದ್ದಾರೆ.





