ಮಾವಿನಕಟ್ಟೆ ಬಳಿ ಬೊಲೆರೋ ಪಲ್ಟಿ. ಹಲವರಿಗೆ ಗಾಯ: ಸ್ಥಳೀಯರಿಂದ ಮಾನವೀಯ ಸ್ಪಂದನೆ

ಸುಳ್ಯ ಸುಬ್ರಹ್ಮಣ್ಯ ದಾರಿ ಮಧ್ಯೆ ಮಾವಿನಕಟ್ಟೆ ತಿರುವಿನಲ್ಲಿ  ಬೊಲೆರೋ ಒಂದು ಪಲ್ಟಿಯಾಗಿ ಹಲವರು ಗಾಯಗೊಂಡಿದ್ದಾರೆ.

ಉಪ್ಪಿನಂಗಡಿಯ ಮಹಮ್ಮದ್ ಇಫ್ವಾನ್ ಎಂಬವರ ವಾಹನ ಎಂದು ತಿಳಿದುಬಂದಿದೆ. ಕೊಡಗಿನ ಎಮ್ಮೆಮಾಡಿಗೆ  ಹೋಗಿ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಹಸೈನಾರ್ ವಳಲಂಬೆ ಯವರು ಸಣ್ಣಪುಟ್ಟ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ತಮ್ಮ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಇತರರು ಜೀರ್ಮುಕ್ಕಿಯ ಮನೆಯೊಂದರಲ್ಲಿ ಇದ್ದಾರೆ.

ಮರಕ್ಕೆ ಡಿಕ್ಕಿ ಹೊಡೆದ ಬೊಲೆರೂ ಸೈಡಿಗೆ ಪಲ್ಟಿಯಾಗಿದ್ದು ಬಾರೀ ಅನಾಹುತದಿಂದ ಪಾರಾಗಿದೆ.

ಸ್ಥಳೀಯ ನಿವಾಸಿಗಳು ಪ್ರತ್ಯಕ್ಷದರ್ಶಿಗಳು ಕಂದಕಕ್ಕೆ ಪಲ್ಟಿಯಾದ ವಾಹನದಿಂದ ಮಹಿಳೆಯರು ಮಕ್ಕಳು ಸೇರಿದಂತೆ ಪ್ರಯಾಣಿಕರನ್ನು ಮೇಲೆತ್ತಿದ್ದು ಅವರ ಬೆಲೆಬಾಳುವ ಮೊಬೈಲು ಇತರ ವಸ್ತುಗಳನ್ನು ಕತ್ತಲೆಯಲ್ಲೂ ಹುಡುಕಾಡಿ ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading