
ಎಸ್ ವೈ ಎಸ್ ಎಲಿಮಲೆ ವಾರ್ಷಿಕ ಮಹಾಸಭೆ ಯು ಅಧ್ಯಕ್ಷರಾದ ಅಶ್ರಫ್ ಜಿ ಎ ಕೆ ರವರ ಅಧ್ಯಕ್ಷತೆಯಲ್ಲಿ ಎಲಿಮಲೆ ಸುನ್ನಿ ಸೆಂಟರ್ ನಲ್ಲಿ ಜರುಗಿತು



ಸಮಿತಿಯ ನೂತನ ಅಧ್ಯಕ್ಷರಾಗಿ ಉಮರ್ ಹನೀಫಿ ಜೀರ್ಮುಖಿ ಉಪಾಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಮೇಲೆ ಬೈಲು, ಕಾರ್ಯದರ್ಶಿಯಾಗಿ ಸೂಫಿ ಎಲಿಮಲೆ, ಕೋಶಾಧಿಕಾರಿಯಾಗಿ ಫಾರೂಕ್ ದೊಡ್ಡಂಗಡಿ, ದಅವಾ ಮತ್ತು ಟ್ರೈನಿಂಗ್ ಮಹಮೂದ್ ಸಖಾಫಿ, ಸಾಂತ್ವನ ಕಾರ್ಯದರ್ಶಿಯಾಗಿ ಸಿಯಾಬ್ ಪಾಣಾಜೆ, ಮತ್ತು ಸದಸ್ಯರಾಗಿ ಅಶ್ರಫ್ ಕಲ್ಲುಪಣೆ, ನಿಯಾಜ್ ದೊಡ್ಡಂಗಡಿ, ಬಶೀರ್ ಮೆತ್ತಡ್ಕ, ರಫೀಕ್ ಮೆತ್ತಡ್ಕ, ರಶೀದ್ ಮೇಲೆ ಬೈಲು, ಇಬ್ರಾಹಿಂ ಜೀರ್ಮುಖಿ, ಜುನೈದ್ ಸಖಾಫಿ ಆಯ್ಕೆಯಾದರು.
ಆಯ್ಕೆ ಪ್ರಕ್ರಿಯೆಯನ್ನು ಎಸ್ ವೈ ಎಸ್ ಸುಳ್ಯ ಸರ್ಕಲ್ ಪ್ರಧಾನ ಕಾರ್ಯದರ್ಶಿ ನೌಶಾದ್ ಕೆರೆಮೂಲೆ ನೆರವೇರಿಸಿದರು, ಅತಿಥಿಗಳಾಗಿ ಕರ್ನಾಟಕ ಮುಸ್ಲಿಂ ಜಮಾತ್ ಎಲಿಮಲೆ ಯೂನಿಟ್ ಅಧ್ಯಕ್ಷರಾದ ಅಬ್ದುಲ್ಲಾ ಜಿಎಕೆ , ಎಸ್ ಎಸ್ ಎಫ್ ಎಲಿಮಲೆ ಅಧ್ಯಕ್ಷರಾದ ಸುಹೈಬ್ ಜೀರ್ಮುಖಿ ಉಪಸ್ಥಿತರಿದ್ದರು. ಬಳಿಕ ಮಾಸಿಕ ಮಹ್ಳ ರತುಲ್ ಬದರಿಯಾ ಮಜ್ಲಿಸ್ ಮತ್ತು ತಾಜಲ್ ಫುಖಆಹ್ ದರ್ಸ್ ನಡೆಯಿತು
ಉಮರ್ ಮುಸ್ಲಿಯಾರ್ ಸ್ವಾಗತಿಸಿ ವಂದಿಸಿದರು.







