ಕುದುಂಬ್ಲಾಡಿಯಲ್ಲಿ ಮರ್‌‌ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್‌‌ಲಿಸ್‌‌, ಅನುಸ್ಮರಣಾ ಸಂಗಮ


ಬಂಟ್ವಾಳ: ಕೆದಿಲ ಗ್ರಾಮದ ಕುದುಂಬ್ಲಾಡಿಯಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಸಂಸ್ಥೆಯಲ್ಲಿ ಜಲಾಲಿಯ್ಯಾ ಆಧ್ಯಾತ್ಮಿಕ ಮಜ್‌‌ಲಿಸ್‌‌, ಮರ್‌‌ಹಬಾ ಯಾ ರಬೀಅ್, ಅಗಲಿದ ಮಹಾತ್ಮರ ಅನುಸ್ಮರಣೆ ಕಾರ್ಯಕ್ರಮಗಳು ಇಂದು ಆಗಸ್ಟ್-6 ಬೆಳಿಗ್ಗೆ 11ಕ್ಕೆ ನಡೆಯಿತು.
ಅಲ್-ಮುರ್ಶಿದ್ ಇಸ್ಲಾಮಿಕ್ ಅಕಾಡೆಮಿ ಕ್ಯಾಂಪಸ್‌‌ನಲ್ಲಿ ನಡೆದ ಈ ಎಲ್ಲಾ ಕಾರ್ಯಕ್ರಮಗಳಿಗೆ
ಸಯ್ಯಿದ್ ಯು.ಪಿ.ಎಸ್ ತಙ್ಙಳ್ ಸಾಲೆತ್ತೂರು,
ಸಂಸ್ಥೆಯ ಸಾರಥಿ ಶೈಖುನಾ ಎಂ.ಇ ಅಬ್ದುರ್ರಝ್ಝಾಖ್ ಮದನಿ, ಕಾಮಿಲ್ ಸಖಾಫಿ ಸೂರಿಕುಮೇರು,
ಅಕ್ಬರ್ ಅಲಿ ಸ‌‌ಅದಿ ಹಂಡೇಲು, ಸಾಬಿತ್ ಸ‌ಅದಿ ಅಳಕ್ಕೆ, ಪಿ.ಎ ರಫೀಖ್ ಮದನಿ, ಪಾಟ್ರಕೋಡಿ, ಮಹ್‌‌ಮೂದ್ ಸ‌‌ಅದಿ ಕೋಡಿ, ಕುಂದಾಪುರ ಮೊದಲಾದ ಉಲಮಾ ಸಾದಾತ್‌‌ಗಳು ನೇತೃತ್ವ ನೀಡಿದರು.
ಮೋಗ್ರಾಲ್ ಮೈಮೂನ್ ನಗರದ ಮುದರ್ರಿಸ್
ಇರ್ಫಾನ್ ಸಖಾಫಿ ಕಿನ್ಯಾರವರು ಮುಖ್ಯ ಪ್ರಭಾಷಣ ನಡೆಸಿದರು.
ಯೂಸುಫ್ ಹಾಜಿ ಸೂರಿಕುಮೇರು,
ನಿಝಾಮುದ್ದೀನ್ ಸ‌‌ಅದಿ ಸೂರಿಕುಮೇರು, ಅಬ್ದುಲ್ ಅಝೀಝ್ ಲತ್ವೀಫಿ ಸರಳಿಕಟ್ಟೆ, ಅಬ್ದುಲ್ ಮಜೀದ್ ಝುಹ್‌‌ರಿ ಮಂಜನಾಡಿ, ಜಲೀಲ್ ಹಾಜಿ ಸೂರಿಂಜೆ, ಶಫೀಖ್ ಹಾಜಿ ಸೂರಿಂಜೆ,ಕಾಸಿಂ
ಹಾಜಿ ಮಿತ್ತೂರು, ಅಬೂಬಕ್ಕರ್ ಹಾಜಿ ಕೊಳಚಪ್ಪು, ಸೇರಿದಂತೆ ಅನೇಕ ಉಲಮಾ-ಉಮರಾಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

Leave a Reply

Discover more from

Subscribe now to keep reading and get access to the full archive.

Continue reading