ರಸ್ತೆಗೆ ಇಳಿಯುವಾಗ ಇನ್ಶೂರೆನ್ಸ್ ಕಡ್ಡಾಯ; ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಿನ ನಿರ್ದೇಶನಗಳನ್ನು ತಿಳಿದುಕೊಳ್ಳಿ

ದೇಶದಲ್ಲಿ ಚಲಿಸುವ ಶೇಕಡಾ 50 ಕ್ಕಿಂತ ಹೆಚ್ಚು (56%) ವಾಹನಗಳು ಯಾವುದೇ ಮಾನ್ಯವಾದ ಇನ್ಶೂರೆನ್ಸ್ ಇಲ್ಲದೆ ರಸ್ತೆಗೆ ಇಳಿಯುತ್ತಿವೆ. ಸಂಸದೀಯ ಸ್ಥಾಯಿ ಸಮಿತಿ ವರದಿಯ ಆಧಾರದ ಮೇಲೆ ಸುಪ್ರೀಂ ಕೋರ್ಟ್ ನೀಡಿರುವ ಈ ಅಂಕಿ-ಅಂಶಗಳು ತೀವ್ರ ಕಳವಳವನ್ನುಂಟುಮಾಡಿವೆ. ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಅರ್ಹ ಪರಿಹಾರ ವಿಳಂಬವಾಗುವುದನ್ನು ಅಥವಾ ಸಿಗದಿರುವುದನ್ನು ತಡೆಯಲು ಸುಪ್ರೀಂ ಕೋರ್ಟ್ ನೀಡಿರುವ ಪ್ರಮುಖ ನಿರ್ದೇಶನಗಳು ಇಲ್ಲಿವೆ:

ಮಾನ್ಯವಾದ ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡುವಂತಿಲ್ಲ. ಇದಕ್ಕಾಗಿ ಪೈಲಟ್ ಯೋಜನೆಯನ್ನು ಸಿದ್ಧಪಡಿಸಲು ಕೇಂದ್ರ ಸರ್ಕಾರ ಮತ್ತು ಐಆರ್‌ಡಿಎಐ (IRDAI) ಗೆ ಕೋರ್ಟ್ ನಿರ್ದೇಶನ ನೀಡಿದೆ.

ಹೊಸ ಕಾರುಗಳ ಕಡ್ಡಾಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅನ್ನು 3 ವರ್ಷಗಳಿಂದ 4 ವರ್ಷಗಳಿಗೆ ಮತ್ತು ದ್ವಿಚಕ್ರ ವಾಹನಗಳ ಇನ್ಶೂರೆನ್ಸ್ ಅನ್ನು 5 ವರ್ಷಗಳಿಂದ 6 ವರ್ಷಗಳಿಗೆ ಹೆಚ್ಚಿಸಲು ಸೂಚಿಸಲಾಗಿದೆ.

‘ವಾಹನ್’ ಪೋರ್ಟಲ್‌ಗೆ ಸಂಪರ್ಕಗೊಂಡಿರುವ ಆ್ಯಪ್‌ಗಳು ಮತ್ತು ಸಾಧನಗಳನ್ನು ಸಂಚಾರ ಪೊಲೀಸರಿಗೆ ನೀಡಿ, ಇನ್ಶೂರೆನ್ಸ್ ಇಲ್ಲದ ವಾಹನಗಳಿಗೆ ತಕ್ಷಣವೇ ದಂಡ ವಿಧಿಸಲು ವ್ಯವಸ್ಥೆ ಮಾಡಲಾಗುವುದು.

ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪ್ರಮುಖ ರಸ್ತೆಗಳಲ್ಲಿನ ಎಎನ್‌ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮೆರಾಗಳ ಮೂಲಕ ಇನ್ಶೂರೆನ್ಸ್ ಇಲ್ಲದ ವಾಹನಗಳನ್ನು ಪತ್ತೆಹಚ್ಚಿ ತಕ್ಷಣವೇ ಇ-ಚಲನ್ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದು.

ನಿಮ್ಮ ವಾಹನದ ಇನ್ಶೂರೆನ್ಸ್ ಅನ್ನು ಸೂಕ್ತ ಸಮಯಕ್ಕೆ ನವೀಕರಿಸಲು ಇನ್ಮುಂದೆ ತಡಮಾಡಬೇಡಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಹಂಚಿಕೊಳ್ಳಿ.

Leave a Reply

Discover more from

Subscribe now to keep reading and get access to the full archive.

Continue reading