,ಮತದಾರರ ಪಟ್ಟಿ ಪರಿಶೀಲನೆ ಹಾಗೂ ವಿಚಾರಣಾ ಪ್ರಕ್ರಿಯೆಯು ನಡೆಯುತ್ತಿದ್ದು SIR ವಿಷಯದಲ್ಲಿ ಆತಂಕಿತರಾಗಿದ್ದ ವಿದೇಶದಲ್ಲಿರುವ (Out of India) ಮತದಾರರಿಗಾಗಿ ವಿಶೇಷ ಸೂಚನೆಗಳನ್ನು ಹೊರಡಿಸಲಾಗಿದೆ. ವಿದೇಶದಲ್ಲಿರುವ ಮತದಾರರು ವಿಚಾರಣೆಗೆ ಖುದ್ದಾಗಿ ಬರಲು ಸಾಧ್ಯವಿಲ್ಲದಿದ್ದಲ್ಲಿ, ಅವರ ಮನೆಯವರು ಅಥವಾ ಪೋಷಕರು ಮೂಲ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಇತ್ಯಾದಿಗಳೊಂದಿಗೆ ಕಡ್ಡಾಯವಾಗಿ ವೀಸಾ ಜೆರಾಕ್ಸ್ ಪ್ರತಿಯನ್ನು ಸಹ ಹೊಂದಿರಬೇಕು. ವಿಚಾರಣೆಯ ಸಂದರ್ಭದಲ್ಲಿ ಪೋಷಕರ ಮೊಬೈಲ್ ಮೂಲಕ ವಿದೇಶದಲ್ಲಿರುವ ಮತದಾರರಿಗೆ ವೀಡಿಯೋ ಕಾಲ್ ಮಾಡಿ ಪರಿಶೀಲನೆ ನಡೆಸಲಾಗುವುದು. ಸಂಬಂಧಿತ ಮತದಾರರು ಹಾಗೂ ಅವರ ಕುಟುಂಬದವರು ಈ ನಿಯಮಗಳನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.