ಚೆನ್ನೈ: ತಮಿಳುನಾಡಿನ ಟಿ.ವಿ.ಕೆ (TVK) ಸರ್ಕಾರದ ಚೊಚ್ಚಲ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳ ಮಹಾಪೂರವೇ ಹರಿದುಬಂದಿದೆ. ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ಗಳು ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಯುವತಿಯರಿಗೆ ಮದುವೆ ಉಡುಗೊರೆಯಾಗಿ ಚಿನ್ನ ಮತ್ತು ಸೀರೆಯನ್ನು ಒಳಗೊಂಡ ಬೃಹತ್ ಯೋಜನೆಗಳನ್ನು ಹಣಕಾಸು ಸಚಿವ ಎನ್. ಮಾರಿಯಾ ವಿಲ್ಸನ್ ವಿಧಾನಸಭೆಯಲ್ಲಿ ಮಂಡಿಸಿದರು. ಬಜೆಟ್‌ನಲ್ಲಿ ಶಿಕ್ಷಣ, ಮಹಿಳಾ ಕಲ್ಯಾಣ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.
ಅಣ್ಣನ್ ಸೀರ್ ತಿಟ್ಟಂ: ಅರ್ಹ ಯುವತಿಯರ ಮದುವೆಗೆ 8 ಗ್ರಾಂ ಚಿನ್ನ ಮತ್ತು ಸೀರೆಯನ್ನು ನೀಡುವ ಈ ಯೋಜನೆಗಾಗಿ 812 ಕೋಟಿ ರೂ. ಕಾಯ್ದಿರಿಸಲಾಗಿದೆ.
ವೆಟ್ರಿ ಲ್ಯಾಪ್‌ಟಾಪ್ ಸ್ಕೀಮ್: ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ವಿತರಿಸಲು 2,000 ಕೋಟಿ ರೂ. ಮಂಜೂರು ಮಾಡಲಾಗಿದೆ.
ಶಾಲೆಗಳ ನವೀಕರಣ: ಸರ್ಕಾರಿ ಶಾಲೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನವೀಕರಣಕ್ಕಾಗಿ 2,132 ಕೋಟಿ ರೂ. ಮೀಸಲಿಡಲಾಗಿದೆ.