ಸುಳ್ಯ: 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅಧಿಕಾರ ಸ್ವೀಕಾರ; ಟಿ.ಎಂ ಶಹೀದ್ ತೆಕ್ಕಿಲ್ ಹಾಗೂ ಇಸ್ಹಾಕ್ ಹಾಜಿ’ಯವರಿಗೆ ಸನ್ಮಾನ

ಸುಳ್ಯ: ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಇದರ ಅಧೀನದಲ್ಲಿ ಬರುವ 13 ಜಮಾಅತ್‌ಗಳ ಸಂಯುಕ್ತ ಖಾಝಿಯಾಗಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಅಸ್ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಆ. 4ರಂದು ಅಧಿಕಾರ ಸ್ವೀಕಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಈ ಸಂಧರ್ಭದಲ್ಲಿ ಸಾಮಾಜಿಕ, ರಾಜಕೀಯ, ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಬ್ಬರು ಗಣ್ಯರನ್ನು ಸನ್ಮಾನಿಸಲಾಯಿತು. ಈ ಕಾರ್ಯಕ್ರಮದ ಯಶಸ್ಸಿನ ಹಿನ್ನೆಲೆಯಲ್ಲಿ ಸದಾ ಕೇಳಿಬರುವ ಹೆಸರುಗಳಲ್ಲಿ ಒಂದಾದ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೌರವಾನ್ವಿತ ಟಿ.ಎಂ. ಶಹೀದ್ ತೆಕ್ಕಿಲ್ ಅವರನ್ನು ಈ ವೇದಿಕೆಯಲ್ಲಿ ಶಾಲು‌ ಹೊದಿಸಿ ಸನ್ಮಾನಿಸಲಾಯಿತು.ಅದೇ ರೀತಿ ಮತ್ತೋರ್ವ ವ್ಯಕ್ತಿ, ಕಳೆದ ಹಲವು ವರ್ಷಗಳಿಂದ ‘ಸಮಸ್ತ’ ಮತ್ತು ಸಮಾಜಕ್ಕಾಗಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಇಸ್ಹಾಕ್ ಹಾಜಿ ಅವರನ್ನು ಕೂಡ ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು.

Leave a Reply

Discover more from

Subscribe now to keep reading and get access to the full archive.

Continue reading