ಬಂಟ್ವಾಳ: SKSSF ಬಂಟ್ವಾಳ ವಲಯದ ಮಾಜಿ ವಿಖಾಯ ಚೇರ್ಮನ್ ಹಾಗೂ ಸಕ್ರಿಯ ಕಾರ್ಯಕರ್ತರಾದ ಮಯ್ಯದ್ದಿ ಕಲ್ಲಗುಡ್ಡೆ (ಮಯ್ಯದ್ದಿ ಕಲ್ಲಡ್ಕ) ಅವರು ಇಂದು ತಡರಾತ್ರಿ ಸುಮಾರು 1:30 ರ ವೇಳೆಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಥಿಕ ರಂಗಗಳಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿದ್ದ ಮಯ್ಯದ್ದಿ ಕಲ್ಲಗುಡ್ಡೆ ಅವರ ಆಕಸ್ಮಿಕ ಅಗಲಿಕೆ ವಲಯದಾದ್ಯಂತ ತೀವ್ರ ಶೋಕವನ್ನು ತಂದೊಡ್ಡಿದೆ. ವಿಖಾಯ ಕಾರ್ಯಪಡೆಯ ಮೂಲಕ ತುರ್ತು ಸೇವೆ ಹಾಗೂ ಸಮಾಜಸೇವೆಯಲ್ಲಿ ಅವರು ನಿರಂತರವಾಗಿ ಸಕ್ರಿಯರಾಗಿದ್ದರು.
ಸಂತಾಪ ಪ್ರಾರ್ಥನೆ
“ಅಲ್ಲಾಹು ಅವರ ಸಕಲ ಸತ್ಕಾರ್ಯಗಳನ್ನು ಕಬೂಲ್ ಮಾಡಿ, ಅವರ ಪಾಪಗಳನ್ನು ಕ್ಷಮಿಸಿ, ಅವರಿಗೆ ಜನ್ನತುಲ್ ಫಿರ್ದೌಸ್‌ನ ಉನ್ನತ ಸ್ಥಾನವನ್ನು ದಯಪಾಲಿಸಲಿ. ಅವರ ಅಗಲಿಕೆಯಿಂದ ಕಂಗಾಲಾಗಿರುವ ಕುಟುಂಬದವರಿಗೆ, ಬಂಧು-ಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ಅಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಅಲ್ಲಾಹು ನೀಡಲಿ.” ಆಮೀನ್.







