





ಸುಳ್ಯ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ಸುಳ್ಯ ಸೀಮೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ ಇಲ್ಲಿ ಜುಲೈ 17ರಿಂದ ಆಗಸ್ಟ್ 14ರ ತನಕ ಪ್ರತೀ ಶುಕ್ರವಾರಗಳಂದು ವಿಶೇಷ ದುರ್ಗಾಪೂಜೆ ನೆರವೇರಲಿದೆ.
ಪೂಜಾ ಸಂದರ್ಭದಲ್ಲಿ ಶಿವಶಂಕರಿ ಮಹಿಳಾ ಭಜನಾ ಸಂಘ ಇವರ ನೇತೃತ್ವದಲ್ಲಿ ಭಜನಾ ಸೇವೆ ಜರುಗಲಿದೆ.
ವಿಶೇಷ ಸೂಚನೆ ಹಾಗೂ ವಿವರಗಳು:
ಪೂಜೆ ಮಾಡಿಸುವ ಭಕ್ತಾದಿಗಳು ಮುಂಗಡವಾಗಿ ಶ್ರೀ ದೇವಳದ ಕಚೇರಿಗೆ ಮಾಹಿತಿ ತಿಳಿಸತಕ್ಕದ್ದು. ಪೂಜಾ ಬಾಬು ರೂ. 500/- ರಶೀದಿ ಮಾಡಿ ಪೂಜಾ ದಿನದಂದು ಸಂಜೆ 5.30 ಗಂಟೆಗೆ ದೇವಸ್ಥಾನದಲ್ಲಿ ಹಾಜರಿರಬೇಕಾಗಿ ವಿನಂತಿಸಲಾಗಿದೆ.
ಸ್ಥಳ ಹಾಗೂ ಸಂಪರ್ಕ ವಿವರ:
ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ತೋಡಿಕಾನ, ಸುಳ್ಯ ತಾಲೂಕು, ದಕ್ಷಿಣ ಕನ್ನಡ – 574314.
ದೂರವಾಣಿ ಸಂಖ್ಯೆ: 9483140142

