










ಗುತ್ತಿಗಾರು: ಇಲ್ಲಿನ ಬದ್ರಿಯ ಜುಮಾ ಮಸೀದಿ ವ್ಯಾಪ್ತಿಯಲ್ಲಿ ಬ್ಯಾಂಕಿಂಗ್, ಸಂಘಟನಾತ್ಮಕ, ವಕ್ಫ್ ಹಾಗೂ ಜಮಾಅತ್ತಿನ ಎಲ್ಲಾ ತರಹದ ಕೆಲಸ ಕಾರ್ಯಗಳನ್ನು ಅತ್ಯಂತ ಜವಾಬ್ದಾರಿ ಮತ್ತು ಕಾಳಜಿಯಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ಕಾರ್ಯದರ್ಶಿಯವರಾದ ಹಸೈನಾರ್ ವಳಲಂಬೆ ಹಾಗೂ ಅವರಿಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿರುವ ಜೊತೆ ಕಾರ್ಯದರ್ಶಿ ಕಲಂದರ್ ಬಾಕಿಲ ಅವರ ನಿಸ್ವಾರ್ಥ ಸೇವೆ ಜಮಾಅತ್ತಿನಾದ್ಯಂತ ಶ್ಲಾಘನೆಗೆ ಪಾತ್ರವಾಗಿದೆ.
ಇತ್ತೀಚೆಗೆ ಜಮಾಅತ್ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾದ SIR ಫಾರಂ ಭರ್ತಿ ಮಾಡುವ ಪ್ರಕ್ರಿಯೆಯನ್ನು ಇವರಿಬ್ಬರ ನೇತೃತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ತಾಲೂಕಿನಾದ್ಯಂತ ಮಾದರಿಯಾಗುವಂತೆ, ಒಟ್ಟು 42 ಮನೆಗಳಿಂದ ಸುಮಾರು 250 ಜನ ಸದಸ್ಯರ SIR ಫಾರಂಗಳನ್ನು ಅತ್ಯಂತ ನಿಖರವಾಗಿ ಮತ್ತು ವ್ಯವಸ್ಥಿತವಾಗಿ ಭರ್ತಿ ಮಾಡಿಕೊಡುವ ಮೂಲಕ ಜಮಾಅತ್ ಬಾಂಧವರಿಗೆ ದೊಡ್ಡ ನೆರವಾಗಿದ್ದಾರೆ.ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳ ನಡುವೆಯೂ, ಜಮಾಅತ್ತಿನ ಹಿತದೃಷ್ಟಿಯಿಂದ ಇವರಿಬ್ಬರು ವ್ಯಯಿಸಿದ ಅಮೂಲ್ಯವಾದ ಸಮಯ ಮತ್ತು ಶ್ರಮ ನಿಜಕ್ಕೂ ಅತ್ಯಮೂಲ್ಯವಾದದ್ದು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಕೇವಲ ಸಮುದಾಯದ ಏಳಿಗೆಗಾಗಿ ಶ್ರಮಿಸಿದ ಇವರ ಈ ನಿಸ್ವಾರ್ಥ ಸೇವೆಗೆ ಜಮಾಅತ್ತಿನ ಸರ್ವ ಸದಸ್ಯರು ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ಇವರ ಈ ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿಯ ಸೇವೆಗೆ ಸರ್ವಶಕ್ತನಾದ ಅಲ್ಲಾಹನು ಸತ್ಫಲಗಳನ್ನು ಕರುಣಿಸಲಿ ಮತ್ತು ಇವರಿಂದ ಮುಂದೆಯೂ ಇಂತಹ ಹತ್ತುಹಲವು ಸತ್ಕಾರ್ಯಗಳು ನಿರಂತರವಾಗಿ ನಡೆಯುವಂತಾಗಲಿ ಎಂದು ಜಮಾಅತ್ ಬಾಂಧವರು ಹಾರೈಸಿದ್ದಾರೆ.
ವರದಿ: ಮಾಧ್ಯಮ ವಿಭಾಗ, ಬದ್ರಿಯ ಜಮಾ ಮಸೀದಿ (ರಿ), ಗುತ್ತಿಗಾರು.

