ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ 14-15 ರಂದು ಎನ್ಯುಮರೇಷನ್ ಫಾರ್ಮ್ ತುಂಬಿಕೊಡುವ ಕಾರ್ಯಕ್ರಮ

ಎಸ್ ಐ ಆರ್ ವಿಷಯವಾಗಿ ಎನ್ಯುಮರೇಷನ್ ಫಾರ್ಮ್ ತುಂಬಲು ಬರುವುದಿಲ್ಲ ನಮಗೆ ಸಹಾಯದ ಅಗತ್ಯವಿದೆ ಎಂದು ತಿಳಿಸಿದ ಕಾರಣ, 14 ಮತ್ತು 15 ರಂದು ಎರಡು ದಿನಗಳ ಕಾಲ ಸಹಾಯ ಮಾಡಲು ತೀರ್ಮಾನ ಮಾಡಲಾಯಿತು. ಅದರಂತೆ ಗ್ರಾಮದ ಯಾವುದೇ ಮತದಾರ ಮತದಾನದಿಂದ ವಂಚಿತವಾಗಬಾರದು ಎನ್ನುವ ಕಾರಣಕ್ಕೆ ಸಂಪಾಜೆ ವಲಯ ಕಾಂಗ್ರೆಸ್ ವತಿಯಿಂದ ಎನ್ಯುಮರೇಷನ್ ಫಾರ್ಮ್ ತುಂಬಿಕೊಡಲು ತೀರ್ಮಾನ ಮಾಡಿರುತ್ತದೆ
ಅದರಂತೆ ಇಂದು ಕಲ್ಲುಗುಂಡಿಯ ಕಲ್ಲುಂಪುರತ್ ಕಾಂಪ್ಲೆಕ್ಸ್ ನಲ್ಲಿ ಎನ್ಯುಮರೇಷನ್ ಫಾರ್ಮ್ ತುಂಬಿಕೊಡುವ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಪಕ್ಷದ ಪರವಾಗಿ ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕರಾದ ಜಾನಿ.ಕೆ.ಪಿ,‌ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಕಾಂಗ್ರೆಸ್ ಉಪಾಧ್ಯಕ್ಷ .ಎ.ಕೆ.ಇಬ್ರಾಹಿಂ , ಸಂಪಾಜೆ ವಲಯ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ವಸಂತ ಗೌಡ ಪೆಲ್ತಡ್ಕ, ಪ್ರದಾನ ಕಾರ್ಯದರ್ಶಿ ಲೂಕಾಸ್ ಟಿ.ಐ,ಗ್ಯಾರಂಟಿ ಸಮಿತಿಯ ಜ್ನಾನಶೀಲನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಲಲನ,ಪ್ರಮೀಳ ಪೆಲ್ತಡ್ಕ, ಕೆ.ಆರ್ ,ಸಾಜಿದ್ I.G.,ಶ್ರೀಧರ್ .K.K.,ನಾಗಮುತ್ತು,ಸೊಹೈಲ್ ಪೇರಡ್ಕಮೊದಲಾದವರು ಸಹಕರಿಸಿದರು.

Leave a Reply

Discover more from

Subscribe now to keep reading and get access to the full archive.

Continue reading