ಕಳೆದೆರಡು ದಿನಗಳಿಂದ ಹಲವರ ನಿದ್ದೆಗೆಡಿಸಿದ್ದ ಜುಬೈರ್ ಪತ್ತೆ ಹಚ್ಚುವಲ್ಲಿ ಆಹೋರಾತ್ರಿ ಶ್ರಮಿಸಿದ್ದ MMYC ತಂಡ ಜುಲೈ ಏಳರಂದು ಮಧ್ಯರಾತ್ರಿ ತನಕ ಹುಡುಕಾಟ ನಡೆಸಿ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಕಂಡು ಹಿಡಿದು ರಾತ್ರಿ ಎರಡೂ ವರೆ ಹೊತ್ತಿಗೆ ಬೆಂಗಳೂರಿಗೆ ತೆರಳಿದ್ದ ಮಾವ ಮುನೀರ್ ಕೈಗೆ ಜುಬೈರ್ ನನ್ನು ಹಸ್ತಾಂತರಿಸಿದ್ದು MMYC ಯ ಪರಿಶ್ರಮ ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.
ಝುಬೈರ್ ಸುಳ್ಯ ರವರನ್ನು ಪತ್ತೆ ಹಚ್ಚಿ ಅವರ ಕುಟುಂಬ ಸದಸ್ಯರಾದ ಮಾವ ಹಾಗೂ ಸಹೋದರರಿಗೆ ಮಧ್ಯ ರಾತ್ರಿ 2:30ಕ್ಕೆ ಹಸ್ತಾಂತರ ಮಾಡಿದ ಕಾರ್ಯಾಚರಣೆಯಲ್ಲಿ ರಶೀದ್ ಎಲಿಮಲೆ, ಹಾರಿಸ್, ಅಬ್ದುಲ್ ಖಾದರ್ ಜೀರ್ಮುಕ್ಕಿ , ಝೈರು ಜತೆಗೆ MMYC ನಾಯಕರಾದ ಹಬೀಬ್ ನಾಳ, ಸಾದಿಕ್,ಆಶ್ರಫ್ ಸುಳ್ಯ,ರಶೀದ್ ಸುಳ್ಯ, ಜುನೈದ್ ಪಿ.ಕೆ ಹಾಗೂ ಇನ್ನಿತರ ನಾಯಕರ ಜೊತೆಗಿದ್ದರು
ಕಡಲಂತಿರುವ ಬೆಂಗಳೂರಿನ ಮೂಲೆ ಮೂಲೆ ಹುಡುಕಿ ದೊಡ್ಡ ದರೋಡೆ ಗ್ಯಾಂಗ್ ಒಂದರ ಕೈಯಿಂದ ಬಿಡಿಸಿಕೊಂಡು ಬಂದರೆಂದು ಹೇಳಲಾದ ಈ ಘಟನೆ ನಿಸ್ವಾರ್ಥ ಯುವಕರ ತಂಡವೊಂದರ ಯಶಸ್ವೀ ಕಾರ್ಯಾಚರಣೆಯಾಗಿದೆ. ಸ್ವಲ್ಪ ವೇ ತಡವಾಗಿದ್ದರೂ ಕಾಣೆಯಾದ ಯುವಕನನ್ನು ಗ್ಯಾಂಗ್ ಬೇರೆಲ್ಲಿಗೋ ಕರೆದೊಯ್ಯುವ ಹುನ್ನಾರ ನಡೆಸಿತ್ತು ಎನ್ನಲಾಗುತ್ತಿದೆ.
ನಾಪತ್ತೆಯಾದ ಯುವಕನ ತಾಯಿಯಿಂದ ಪೋಲೀಸ್ ಕಂಪ್ಲೇಂಟ್ ಕೊಡಿಸುವಲ್ಲಿಂದ ಹಿಡಿದು ಮೊದಲು ನಾಪತ್ತೆ ಸುದ್ದಿ ಪ್ರಕಟಿಸಿ ಇತರ ನ್ಯೂಸ್ ಗಳಲ್ಲಿ ಬರುವಂತೆ ಮಾಡಿ ಪುನಃ ಬೆಂಗಳೂರಿನಲ್ಲಿ ದೂರು ದಾಖಲಿಸಿ ಪತ್ತೆ ಹಚ್ಚಲು ಯುವಕನ ಫೋಟೋ ಮತ್ತು ಡೀಟೇಲ್ಸ್ ಮೂಲೆ ಮೂಲೆಗೆ ಕಳುಹಿಸಿ ವ್ಯಾಪಕ ಪ್ರಚಾರ ಕೊಡುವ ಮೂಲಕ ‘ಸಾಕಾರ ನ್ಯೂಸ್ ತಂಡ’ ಕೂಡಾ ಯುವಕನ ಕುಟುಂಬದ ಜತೆ ಬೆನ್ನೆಲುಬಾಗಿ ನಿಂತಿತ್ತು.








