ನಾಪತ್ತೆಯಾಗಿದ್ದ ಸುಳ್ಯದ ಯುವಕ ಜುಬೈರ್ ಪತ್ತೆಯಾಗಿದ್ದಾನೆ. ಮೆಜೆಸ್ಟಿಕ್ ನ ರೈಲು ನಿಲ್ದಾಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದು ಸುಳ್ಯದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಹಲವು ಯುವಕರು MMYC ಸೇರಿದಂತೆ ಹಲವು ಸಂಘಟನೆಗಳ ಪ್ರಯತ್ನದಿಂದ ವ್ಯಾಪಕ ವಾಗಿ ಹುಡುಕಾಡಿ ಇದೀಗ ಪತ್ತೆಯಾಗಿದ್ದಾನೆ.
ಯುವಕ ಹೇಳುವಂತೆ ಜುಲಾಯಿ 2 ನೇ ತಾರೀಕಿನಂದು ತಾನು ಕೆಲಸ ಮಾಡುವಲ್ಲಿಂದ ಊರಿಗೆ ಹೊರಟ ಹೊತ್ತಿಗೆ ಗೆಳೆಯನೊಬ್ಬನ ಜತೆ ಶಾಪಿಂಗ್ ಗೆ ತರಳಿದ್ದ ವೇಳೆ ತಂಡವೊಂದರಿಂದ ತನ್ನಲ್ಲಿರುವ ಬ್ಯಾಗ್ ಮತ್ತು ಮೊಬೈಲ್ ಕಳೆದುಕೊಂಡು ಇದೀಗ ಮೆಜೆಸ್ಟಿಕ್ ನ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದಾನೆ.
ಕಳೆದ ಎರಡು ದಿನಗಳಿಂದ ಕೆಲಸ ನಿದ್ದೆ ಬಿಟ್ಟು ಹುಡುಕಾಡಿದ್ದ ಸುಳ್ಯದ ಬೆಂಗಳೂರಿನಲ್ಲಿರುವ ಯುವಕರು ಮತ್ತು ಕುಟುಂಬಸ್ಥರು ಮತ್ತು ಊರವರು ನಿರಾಳ ನಿಟ್ಟುಸಿರು ಬಿಟ್ಟಿದ್ದಾರೆ.

