ಐವರ್ನಾಡಿನಲ್ಲಿ ಜೀಪು ಬೈಕ್ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಐವರ್ನಾಡಿನ ಪರ್ಲಿಕಜೆಯಲ್ಲಿ ಜು.07 ರಂದು ರಾತ್ರಿ ಜೀಪು ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಐವರ್ನಾಡು ಕೃಷಿ ಕಾಲನಿಯ ಚಂದ್ರಶೇಖರ ಎಂಬವರು ಗಾಯಗೊಂಡಿದ್ದರು. ಗಾಯಗೊಂಡ ಇವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಅವರು ಗಂಭೀರ ಗಾಯಗೊಂಡಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ತಿಳಿದು ಬಂದಿದೆ. ಇವರಿಗೆ 28 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಲಕ್ಷ್ಮೀ ಹಾಗೂ ಸಹೋದರ,ಸಹೋದರಿಯನ್ನ ಅಗಲಿದ್ದಾರೆ.