ದಕ್ಷಿಣ ಕನ್ನಡ ಜಿಲ್ಲಾ ಖಾಝಿ ನಿಧನಕ್ಕೆ ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಸಂತಾಪ


ಸಮಸ್ತ ಕೇಂದ್ರ ಮುಶಾವರ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾ ಖಾಝಿ, ಧಾರ್ಮಿಕ ಮುಖಂಡರು ಅಲ್ ಹಾಲ್ ತ್ವಾಖಾ ಅಹಮ್ಮದ್ ಮುಸ್ಲಿಯಾರ್ ರವರ ನಿಧನಕ್ಕೆ ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಸಂತಾಪ ವ್ಯಕ್ತ ಪಡಿಸಿರುತ್ತದೆ.


ತನ್ನ ಜೀವನವನ್ನು ಧಾರ್ಮಿಕ ಶಿಕ್ಷಣ ಹಾಗೂ ಸಮಾಜ ಸೇವೆಗೆ ಸಮರ್ಪಿಸಿ ಅನೇಕ ಜಮಾಅತ್ ಗಳಿಗೆ ಖಾಝಿಯಾಗಿ ಸಾವಿರಾರು ಜನರಿಗೆ ಮಾರ್ಗದರ್ಶಕರಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ನಮ್ಮ ಸಮುದಾಯಕ್ಕೆ ಮತ್ತು ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅಲ್ಲಾಹು ಅವರಿಗೆ ಜನ್ನತ್ತುಲ್ ಫಿರ್ದೌಸ್ ನಲ್ಲಿ ಉನ್ನತ ಸ್ಥಾನ ನೀಡಲಿ ಎಂದು ಸುಳ್ಯ ತಾಲೂಕು ಸಮಸ್ತ ಸಂಯುಕ್ತ ಜಮಾಅತ್ ಕಾರ್ಯದರ್ಶಿ ಅಶ್ರಫ್ ಗುಂಡಿ ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading