ಸುಳ್ಯ: ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜನಾಬ್ ಯು.ಟಿ. ಖಾದರ್ ಅವರನ್ನು ಸುಳ್ಯ ತಾಲೂಕು ಜಮೀಯತುಲ್ ಉಲಮಾ ಅಧ್ಯಕ್ಷರು ಹಾಗೂ ಕೆ.ಪಿ.ಸಿ.ಸಿ (KPCC) ಲೀಗಲ್ ಸೆಲ್‌ನ ಪ್ರಧಾನ ಕಾರ್ಯದರ್ಶಿಯಾದ ಮೂಸಕುಂಞಿ ಪೈಂಬಚಾಲ್ ಅವರು ಇಂದು ಭೇಟಿ ಮಾಡಿದರು.

ಭೇಟಿಯ ಸಂದರ್ಭದಲ್ಲಿ ಮೂಸಕುಂಞಿ ಪೈಂಬಚಾಲ್ ಅವರು ಸಚಿವರಿಗೆ ಶಾಲನ್ನು ಹೊದಿಸಿ, ಪುಷ್ಪಗುಚ್ಛ ನೀಡಿ ಗೌರವ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರಮುಖರು ಉಪಸ್ಥಿತರಿದ್ದು, ಕ್ಷೇತ್ರದ ವಿವಿಧ ಪ್ರಚಲಿತ ವಿದ್ಯಮಾನಗಳ ಕುರಿತು ಸಚಿವರೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಲಾಯಿತು ಎಂದು ವರದಿಯಾಗಿದೆ.








