ಶೈಲೇಶ್ ಅಂಬೆಕಲ್ಲು ಅವರಿಗೆ  ರಕ್ತದಾನ ಸೇವಾ ರತ್ನ ಪ್ರಶಸ್ತಿ ಪ್ರಧಾನ

ದೇವಚಳ್ಳ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷರು ಹಾಗೂ ಸುಳ್ಯದ ವೆಂಕಟ್ರಮಣ ಸೊಸೈಟಿಯ ನಿರ್ದೇಶಕರಾದ ಶ್ರೀ ಶೈಲೇಶ್ ಅಂಬೆಕಲ್ಲು ಅವರಿಗೆ ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ರಕ್ತದಾನ ಸೇವಾ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತದೆ.
ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಜೇಸಿಐ ಸುಳ್ಯ ಪಯಸ್ವಿನಿ ಸಂಸ್ಥೆಯು ಈ ಮಹತ್ವದ ಗೌರವವನ್ನು ಅವರಿಗೆ ಅರ್ಪಿಸುವುದಾಗಿ ತಿಳಿಸಿದೆ.



ಜೀವ ಉಳಿಸುವ ಮಹತ್ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಶೈಲೇಶ್ ಅಂಬೆಕಲ್ಲು ಅವರು ಇತ್ತೀಚೆಗಷ್ಟೇ 109ನೇ ಬಾರಿಗೆ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅತ್ಯಂತ ದೊಡ್ಡ ಸಂದೇಶವನ್ನು ನೀಡಿದ್ದಾರೆ. ರಕ್ತದ ಕೊರತೆಯಿಂದ ಬಳಲುವ ಅದೆಷ್ಟೋ ಜೀವಗಳಿಗೆ ಆಸರೆಯಾಗುವ ಮೂಲಕ ಅವರು ಮಾನವೀಯತೆಯ ಉದಾತ್ತ ಗುಣವನ್ನು ಮೆರೆದಿದ್ದಾರೆ.
ಅವರ ಈ ಅಪೂರ್ವ ಸಾಧನೆ ಮತ್ತು ನಿರಂತರ ಸಮಾಜ ಸೇವೆಯನ್ನು ಗುರುತಿಸಿ ಜೇಸಿಐ ಸುಳ್ಯ ಪಯಸ್ವಿನಿ ಸಂಸ್ಥೆಯು ಈ ಬಾರಿಯ  ರಕ್ತದಾನ ಸೇವಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.

ರಕ್ತದಾನವು ಕೇವಲ ಒಂದು ದಾನವಲ್ಲ, ಅದು ಮತ್ತೊಂದು ಜೀವಕ್ಕೆ ನೀಡುವ ಮರುಜನ್ಮ. ಶೈಲೇಶ್ ಅಂಬೆಕಲ್ಲು ಅವರ ಈ ನಿಸ್ವಾರ್ಥ ಸೇವೆ ಇಂದಿನ ಯುವ ಪೀಳಿಗೆಗೆ ದೊಡ್ಡ ಮಾದರಿಯಾಗಿದೆ ಎಂದು ಸಂಸ್ಥೆಯ ಪದಾಧಿಕಾರಿಗಳು ಶ್ಲಾಘಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading