ಹಿರಿಯ ಪತ್ರಕರ್ತೆ ಇಂದಿರಾ ಲಂಕೇಶ್ ನಿಧನ

ಕನ್ನಡ ಮಾಧ್ಯಮ ಲೋಕದ ಅತ್ಯಂತ ಪ್ರಭಾವಶಾಲಿ ಪತ್ರಿಕೆಯಾಗಿದ್ದ  ಲಂಕೇಶ್ ಪತ್ರಿಕೆಯ ಲಂಕೇಶ್ ಅವರ ಪತ್ನಿ ಇಂದಿರಾ ಲಂಕೇಶ್ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಇಂದಿರಾ ಲಂಕೇಶ್ ಅವರು, ಪತಿಯ ನೆರಳಾಗಿ ಮಾತ್ರ ಉಳಿಯದೆ ಸ್ವಂತ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ಇವರಿಗೆ ಮೂವರು ಮಕ್ಕಳಿದ್ದು, ಖ್ಯಾತ ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಾಗೂ ಈ ಹಿಂದೆ ನಿಧನರಾದ ಪ್ರಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ ತಾಯಿಯಾಗಿದ್ದಾರೆ.

ಪಿ. ಲಂಕೇಶ್ ಅವರ ನಿಧನದ ನಂತರ ಲಂಕೇಶ್ ಪ್ರಕಾಶನ ಮತ್ತು ಲಂಕೇಶ್ ಪತ್ರಿಕೆಯ ಜವಾಬ್ದಾರಿಯನ್ನು ಕೆಲ ಕಾಲ ಹೊತ್ತುಕೊಂಡಿದ್ದರು ಲಂಕೇಶ್ ಪ್ರಕಾಶನದ ಮೂಲಕ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಧನಸಹಾಯ ಮತ್ತು ಪ್ರೋತ್ಸಾಹ ನೀಡಿದರು ಕೇವಲ ವ್ಯವಸ್ಥಾಪಕಿಯಾಗಿ ಮಾತ್ರವಲ್ಲದೆ, ಕೌಟುಂಬಿಕ ಹಾಗೂ ಸಾಮಾಜಿಕ ವಿಷಯಗಳ ಕುರಿತು ಲೇಖನಗಳನ್ನು ಬರೆಯುವ ಮೂಲಕ ಓದುಗರಿಗೆ ಹತ್ತಿರವಾಗಿದ್ದರು.

ಮಗಳು ಗೌರಿ ಲಂಕೇಶ್ ಅವರು ಪ್ಯಾಸಿಸಮ್ ವಿರುದ್ಧ ದಿಟ್ಟ ಹೋರಾಟ ನಡೆಸಿ ಕೊನೆಗೆ ಹಂತಕರಿಂದ ಹತರಾದ  ಸಂದರ್ಭದಲ್ಲೂ ಧೃತಿಗೆಡದೆ, ನ್ಯಾಯಕ್ಕಾಗಿ ಹೋರಾಡಿದ ಇಂದಿರಾ ಲಂಕೇಶ್ ಅವರ ಧೈರ್ಯ ಯುವ ಪೀಳಿಗೆಗೆ ಪ್ರೇರಣೆ.

ಇಂದಿರಾ ಅವರು  ಸದಾ ಸಾಹಿತ್ಯ ಮತ್ತು ಪ್ರಗತಿಪರ ಚಿಂತನೆಗಳ ಪರವಾಗಿ ನಿಂತಿದ್ದರು. ಅವರ ನಿಧನಕ್ಕೆ ನಾಡಿನ ಗಣ್ಯರು, ಸಾಹಿತಿಗಳು, ಪತ್ರಕರ್ತರು ಮತ್ತು ರಾಜಕಾರಣಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅವರ ಮರಣದಿಂದ ಕನ್ನಡ ಪತ್ರಿಕೋದ್ಯಮದ ಒಂದು ಪ್ರಮುಖ ಕೊಂಡಿ ಕಳಚಿದಂತಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸೋಣ.

Leave a Reply

Discover more from

Subscribe now to keep reading and get access to the full archive.

Continue reading