ಸುಳ್ಯದ ಹೆಸರಾಂತ ಇ ಎನ್ ಟಿ ವೈದ್ಯರ ಮಗಳಾದ ಅಭಿಜ್ಞಾ ಭಟ್ ನಿಧನ


ಸುಳ್ಯದ ಹೆಸರಾಂತ ಇ ಎನ್ ಟಿ ವೈದ್ಯರಾದ ಡಾ. ರವಿಶಂಕರ್ ರವರ ಹಿರಿಯ ಪುತ್ರಿ ಕುಮಾರಿ ಅಭಿಜ್ಞಾ ಭಟ್ ಅವರು ಅಲ್ಪಕಾಲದ ಅಸ್ವಸ್ಥತೆಯಿಂದಾಗಿ ಜೂನ್ ಹತ್ತರಂದು ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಹತ್ತೊಂಬತ್ತು ವರ್ಷ ವಯಸ್ಸಾಗಿತ್ತು.

ಮೃತ ಅಭಿಜ್ಞಾ ಭಟ್ ಅವರು ಇತ್ತೀಚೆಗೆಷ್ಟೇ ಪಿಯುಸಿ ವಿದ್ಯಾಭ್ಯಾಸವನ್ನು ಮುಗಿಸಿದ್ದು, ಪರೀಕ್ಷೆಯಲ್ಲಿ ಐನೂರ ತೊಂಬತ್ತೈದು ಅಂಕಗಳನ್ನು ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಐದನೇ ರ್ಯಾಂಕ್ ಗಳಿಸಿದ್ದರು. ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಅವರ ಅಕಾಲಿಕ ನಿಧನವು ತೀವ್ರ ಶೋಕವನ್ನು ಉಂಟುಮಾಡಿದೆ.

ಮೃತರು ತಂದೆ ಡಾ. ರವಿಶಂಕರ್, ತಾಯಿ ಶ್ರೀಮತಿ ಅನುಪಮ, ಸಹೋದರಿ ಕುಮಾರಿ ಅನುಜ್ಞಾ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading