ಗಾಂಧಿನಗರದಲ್ಲಿ ಉಚಿತ ಆರೋಗ್ಯ ಶಿಬಿರ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ ಸುಳ್ಯ ತಾಲೂಕು ಇವರ ಸಹಭಾಗಿತ್ವದಲ್ಲಿ ಮತ್ತು ಕೆಎಂಜೆ ಎಸ್‌ವೈಎಸ್ ಎಸ್‌ಎಸ್‌ಎಫ್ ಗಾಂಧಿನಗರ ಯುನಿಟ್ ಇದರ ಆಶ್ರಯದಲ್ಲಿ ಸಾರ್ವಜನಿಕರಿಗಾಗಿ ಉಚಿತ ರೋಗ ನಿರ್ಣಯ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಈ ಉಚಿತ ಎಕ್ಸ್‌ರೇ, ರಕ್ತದ ಒತ್ತಡ ಹಾಗೂ ಮಧುಮೇಹ ತಪಾಸಣಾ ಶಿಬಿರವು ಜೂನ್ 11,2026 ಗುರುವಾರದಂದು ನಡೆಯಲಿದೆ. ಸುಳ್ಯದ ಗಾಂಧಿನಗರದಲ್ಲಿರುವ ಅನ್ಸಾರ್ ಕಾಂಪ್ಲೆಕ್ಸ್‌ನ ಸುನ್ನಿ ಸೆಂಟರ್‌ನಲ್ಲಿ ಬೆಳಿಗ್ಗೆ ಹತ್ತು ಗಂಟೆಯಿಂದ ಮಧ್ಯಾಹ್ನ ಒಂದು ಗಂಟೆಯವರೆಗೆ ಈ ಶಿಬಿರವು ಜರುಗಲಿದೆ.

ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರಿಗೂ ಈ ಉಚಿತ ತಪಾಸಣೆಯ ಸೌಲಭ್ಯ ಲಭ್ಯವಿರಲಿದ್ದು, ಸುಳ್ಯ ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಕೆಎಂಜೆ ಎಸ್‌ವೈಎಸ್ ಎಸ್‌ಎಸ್‌ಎಫ್ ಗಾಂಧಿನಗರ ಯುನಿಟ್‌ನ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಶಿಬಿರಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಆದರದ ಸ್ವಾಗತ ಕೋರಲಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading