ದಕ್ಷಿಣ ಕನ್ನಡಸಂಪಾಜೆ ಗ್ರಾಮದ ಕೀಲಾರು ನಿವಾಸಿ ಚಾಲನ ತರಬೇತಿ ಶಿಕ್ಷಕರಾಗಿದ್ದ, ಸಾರಿಗೆ ಇಲಾಖೆಯ ಕೆಲಸಗಳನ್ನು ನಿರ್ವಹಿಸಲು ಸಹಕರಿಸುತ್ತಿದ್ದ, ಆರ್ ಟಿ ಓ ಜಯಣ್ಣ ಎಂದೇ ಪರಿಚಿತರಾಗಿದ್ದ ಜಯಾನಂದರವರು ಜೂನ್ 7 ರಂದು ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು
ಮೃತರ ಪಾರ್ಥಿವ ಶರೀರ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಕಲ್ಲುಗುಂಡಿ ತಲುಪುತ್ತದೆ.
ಪರೋಪಕಾರಿಯಾಗಿ ಜನಪ್ರೀತಿಗಳಿಸಿದ್ದ ಜಯಾನಂದರ ಅಕಾಲಿಕ ವಿಯೋಗಕ್ಕೆ ಹಲವಾರು ಮಂದಿ ಕಂಬನಿ ಮಿಡಿದು ಸಂತಾಪ ಸೂಚಿಸಿದ್ದಾರೆ





