ಚೆನ್ನೈ ಸೂಪರ್ ಕಿಂಗ್ಸ್ ಗೆ ಇದೆ ಪ್ಲೇಆಫ್ ಅವಕಾಶ!

ಐಪಿಎಲ್’26 ಸೀಸನ್ ಕೊನೆಯ ಹಂತಕ್ಕೆ ಪ್ರವೇಶಿಸುತ್ತಿರುವಾಗ ಪ್ಲೇಆಫ್ ಪೈಪೋಟಿ ಭಾರೀ ರೋಚಕವಾಗಿದೆ. ಹೊಸ ಲೆಕ್ಕಾಚಾರಗಳ ಪ್ರಕಾರ, ಚೆನ್ನೈ ಸೂಪರ್ ಕಿಂಗ್ಸ್ ಇನ್ನೂ ಪ್ಲೇಆಫ್ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿಲ್ಲ.ಕೇವಲ 14 ಪಾಯಿಂಟ್‌ಗಳೊಂದಿಗೆ ಚೆನ್ನೈ ನಾಲ್ಕನೇ ಸ್ಥಾನ ಪಡೆದು ಮುಂದಿನ ಹಂತಕ್ಕೆ ಅರ್ಹತೆ ಪಡೆಯಬಹುದು. ಆದರೆ ಅದಕ್ಕಾಗಿ ತಮ್ಮ ಪಂದ್ಯ ಗೆಲ್ಲುವುದಷ್ಟೇ ಸಾಕಾಗುವುದಿಲ್ಲ; ಇತರೆ ಕೆಲವು ತಂಡಗಳ ಫಲಿತಾಂಶಗಳೂ ಚೆನ್ನೈ ಪರವಾಗಿ ಬರಬೇಕು.

ಗುಜರಾತ್ ಟೈಟನ್ಸ್ ವಿರುದ್ಧ ಗೆಲ್ಲಬೇಕು, ಜೊತೆಗೆ ಅದೃಷ್ಟವೂ ಬೇಕು…

ಚೆನ್ನೈ ಪ್ಲೇಆಫ್ ತಲುಪಲು ಮೊದಲ ಷರತ್ತು ಏನೆಂದರೆ ಇವತ್ತು ನಡೆಯಲಿರುವ ಚೆನ್ನೈ ಗುಜರಾತ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಸೋಲಿಸಬೇಕು. ಆ ಪಂದ್ಯದಲ್ಲಿ ದೊಡ್ಡ ಅಂತರದ ಜಯ ಸಾಧಿಸಿ 14 ಪಾಯಿಂಟ್ ತಲುಪುವುದು. ಆದರೆ ಇದರಿಂದ ಮಾತ್ರ ಕೆಲಸ ಮುಗಿಯುವುದಿಲ್ಲ. ಉಳಿದ ಕೆಲವು ಪ್ರಮುಖ ತಂಡಗಳ ಫಲಿತಾಂಶಗಳೂ ಚೆನ್ನೈಗೆ ಅನುಕೂಲಕರವಾಗಿರಬೇಕು.

ಮುಂದಿನ ದಿನಗಳಲ್ಲಿ ನಡೆಯಲಿರುವ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೋಲುವುದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆಲುವು ಸಾಧಿಸಬೇಕು.ಈ ಅಚ್ಚರಿ ಫಲಿತಾಂಶಗಳು ನಿಜವಾದರೆ ಪಾಯಿಂಟ್ ಪಟ್ಟಿಯಲ್ಲಿ ಭಾರೀ ಬದಲಾವಣೆಗಳು ಸಂಭವಿಸಬಹುದು.

ಸಂಜು ಸಾಂಮ್ಸನ್ ಸೇರಿದಂತೆ ಪ್ರಮುಖ ಆಟಗಾರರಿರುವ ಚೆನ್ನೈ ಪಡೆಗೆ ಇಂದಿನ ಪಂದ್ಯ ನಿರ್ಣಾಯಕವಾಗುವುದು ಮಾತ್ರವಲ್ಲದೆ ಮತ್ತೆ ಮೂರು ತಂಡಗಳ ಫಲಿತಾಂಶವು ನಿರ್ಣಾಯಕವಾಗಿದೆ.

Leave a Reply

Discover more from

Subscribe now to keep reading and get access to the full archive.

Continue reading