ರೈತ ಸಂಘದ ಧುರೀಣ, ಪ್ರಗತಿಪರ ಕೃಷಿಕ ನಾರಾಯಣ ರಾವ್ ಕೊಲ್ಲಾಜೆ ನಿಧನ

ಬೆಳ್ತಂಗಡಿ: ಕರ್ನಾಟಕ ರಾಜ್ಯ ರೈತ ಸಂಘದ ಬೆಳ್ತಂಗಡಿ ತಾಲೂಕು ಘಟಕದ ಗೌರವಾಧ್ಯಕ್ಷರು, ಪ್ರಗತಿಪರ ಕೃಷಿಕರು ಹಾಗೂ ಕೊಲ್ಲಾಜೆ ಚಿನ್ನದ ಆಭರಣ ಸಂಸ್ಥೆಯ ಮಾಲೀಕರಾದ ನಾರಾಯಣ ರಾವ್ ಕೊಲ್ಲಾಜೆ (74 ವರ್ಷ) ಅವರು ತೀವ್ರ ಅನಾರೋಗ್ಯದ ಕಾರಣದಿಂದ ನಿನ್ನೆ ತಡರಾತ್ರಿ ನಿಧನರಾಗಿದ್ದಾರೆ.

ಅವರು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಯುವ ಸಂಚಾಲಕರಾದ ಆದಿತ್ಯ ಎನ್. ಕೊಲ್ಲಾಜೆ ಅವರ ತಂದೆಯಾಗಿದ್ದಾರೆ. ಮೃತರು ಕೇವಲ ಕೃಷಿ ವಲಯ ಮಾತ್ರವಲ್ಲದೆ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೂ ದಾನಿಗಳಾಗಿ ಗುರುತಿಸಿಕೊಂಡಿದ್ದರು. ರೈತ ಚಳವಳಿ ಮತ್ತು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು, ಸ್ಥಳೀಯವಾಗಿ ಅಪಾರ ಗೌರವಕ್ಕೆ ಪಾತ್ರರಾಗಿದ್ದರು.

ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 9:00 ಗಂಟೆಗೆ ಮಂಗಳೂರಿನ ಬೋಳಾರಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ನೆರವೇರಿತು. ನಾರಾಯಣ ರಾವ್ ಕೊಲ್ಲಾಜೆ ಅವರ ನಿಧನಕ್ಕೆ ರೈತ ಸಂಘದ ಮುಖಂಡ ರವಿಕಿರಣ್ ಪುಣಚ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಕೃಷಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ‘ಹಸಿರು ನಮನ’ಗಳನ್ನು ಸಲ್ಲಿಸಿದ್ದಾರೆ.

Leave a Reply

Discover more from

Subscribe now to keep reading and get access to the full archive.

Continue reading