ಬೆಂಗಳೂರು: ಸಜ್ಜನ ಪ್ರತಿಷ್ಠಾನ ಹಾಗೂ ಯೂನಿಕ್ ಕನ್ಸಲ್ಟನ್ಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಂಪನಿ ಉದ್ಯೋಗಿಗಳಿಗಾಗಿ ಹಮ್ಮಿಕೊಳ್ಳಲಾಗಿದ್ದ ‘ಉನ್ನತ ಕಾರ್ಯಕ್ಷಮತೆಯ ತಂಡಗಳನ್ನು ನಿರ್ಮಿಸುವುದು’ (Building High-Performance Teams) ಎಂಬ ವಿಷಯದ ಕುರಿತಾದ ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವು ಮೇ 16 ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ರಾಧಾ ಹೋಮ್‌ಟೆಲ್‌ನಲ್ಲಿ ಯಶಸ್ವಿಯಾಗಿ ಜರುಗಿತು.


ಕಂಪನಿಗಳಲ್ಲಿ ಉತ್ತಮ ಫಲಿತಾಂಶ ಹಾಗೂ ಪ್ರಗತಿಗಾಗಿ ಉದ್ಯೋಗಿಗಳು ಒಟ್ಟಾಗಿ ಕೆಲಸ ಮಾಡುವುದು ಮತ್ತು ಉನ್ನತ ಕಾರ್ಯಕ್ಷಮತೆಯುಳ್ಳ ತಂಡಗಳನ್ನು ಹೇಗೆ ರೂಪಿಸಬೇಕು ಎಂಬ ಕುರಿತು ಬೆಳಿಗ್ಗೆಯಿಂದ ಸಂಜೆಯವರೆಗೆ ಎರಡು ಪ್ರತ್ಯೇಕ ವಿಭಾಗಗಳಲ್ಲಿ ಉದ್ಯೋಗಿಗಳಿಗೆ ವಿಶೇಷ ಮಾಹಿತಿ ಮತ್ತು ತರಬೇತಿಯನ್ನು ನೀಡಲಾಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಸ್ಮೋಸ್ ಗ್ರೂಪ್ ಆಫ್ ಕಂಪನಿಯ ವಿಪಿ ಹೆಚ್‌ಆರ್ ಹಾಗೂ ವ್ಯವಹಾರಿಕ ವಿಭಾಗದ ಮುಖ್ಯಸ್ಥ ರಾಜಶೇಖರ ರೈ, ಬೆಂಗಳೂರಿನ ವ್ಯಾಪಿ ಲೆಕ್ಸ್ ಟೆಕ್ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕಲಾ ಬೋಸ್, ಸಜ್ಜನ ಕನ್ನಡ ನಾಡು ನುಡಿ ವಿಭಾಗದ ರಾಜ್ಯ ಸಂಚಾಲಕ ಅಡ್ವಕೇಟ್ ಮಂಜುನಾಥ್, ಹಂಪಿ ಕನ್‌ಸ್ಟ್ರಕ್ಷನ್ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ವಿಜಯಕುಮಾರ್ ವಕ, ಮತ್ತು ಸೌತ್ ಏಷಿಯಾ ರಾಲ್ಫ್ ಲಾರೆನ್ ಕಂಪನಿಯ ಹಣಕಾಸು ವಿಭಾಗದ ಮುಖ್ಯಸ್ಥ ಸುಬ್ಬರಾಮು ವಿ. ತಳೂರು ಉಪಸ್ಥಿತರಿದ್ದರು.

ಅಲ್ಲದೆ, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಕಂಪನಿಯ ಸಹಾಯಕ ಮುಖ್ಯ ವ್ಯವಸ್ಥಾಪಕ ಅನಿಲ್ ಚಂದ್ರಶೇಖರ, ಬಿಸಿಎಫ್ ಬೆಂಗಳೂರು ಅಧ್ಯಕ್ಷ ನಟರಾಜ್ ಬಿ., ಇನೊವಿ ಮೊಬಿಲಿಟಿ ಇಂಡಿಯಾ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ವಾಸು ಎಂ., ಕಾರ್ಮಿಕ ಇಲಾಖೆಯ ನಿವೃತ್ತ ಕಮಿಷನರ್ ಗುರುದಾಸ್ ಭಟ್, ಪಾರ್ಮೆಡ್ ಲಿಮಿಟೆಡ್‌ನ ಜನರಲ್ ಮ್ಯಾನೇಜರ್ ಆರಿಸ್ ಪೇರಡ್ಕ ಹಾಗೂ ಬಿಎಫ್‌ಎ ರಾಜ್ಯ ಸಂಚಾಲಕ ನಟರಾಜ್ ಬಿ. ಸೇರಿದಂತೆ ಹಲವು ಕಾರ್ಪೊರೇಟ್ ವಲಯದ ಗಣ್ಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಜ್ಜನ ಪ್ರತಿಷ್ಠಾನದ ವತಿಯಿಂದ ಆಗಮಿಸಿದ ಎಲ್ಲಾ ಗೌರವಾನ್ವಿತ ಅತಿಥಿಗಳನ್ನು ಆತ್ಮೀಯವಾಗಿ ಗೌರವಿಸಿ, ಸನ್ಮಾನಿಸಲಾಯಿತು.
ಆರಂಭದಲ್ಲಿ ವಿಕ್ರಂ ಸಾಗರ್ ಸೆಕ್ಸೆನಾ ಅವರು ಕಾರ್ಯಾಗಾರಕ್ಕೆ ಬಂದಿದ್ದ ಸರ್ವರನ್ನೂ ಸ್ವಾಗತಿಸಿದರು. ಶಶಿಕಾಂತ್ ಬೆಡಸೂರು, ಮಂಜುನಾಥ್ ಹಿರಿಯೂರು, ಮಾಜಿನ್ ಬೀಜದಕಟ್ಟೆ, ಶರೀಫ್ ಜಟ್ಟಿಪಳ್ಳ ಹಾಗೂ ಮರ್ಝೂಕ್ ಜಂಟಿಯಾಗಿ ಕಾರ್ಯಕ್ರಮವನ್ನು ಅತ್ಯಾಕರ್ಷಕವಾಗಿ ನಿರೂಪಿಸಿದರು. ಕೊನೆಯಲ್ಲಿ ಶಂಶಾಕ್ ಸಿಂದ್ಯಾ ಅವರು ಧನ್ಯವಾದ ಸಮರ್ಪಿಸಿದರು. ವಿವಿಧ ಕಂಪನಿಗಳ ನೂರಾರು ಉದ್ಯೋಗಿಗಳು ಈ ತರಬೇತಿಯ ಸದುಪಯೋಗ ಪಡೆದುಕೊಂಡರು.

