ಜಯನಗರದಲ್ಲಿ ಮೇ 24 ರಂದು ಮಾಸಿಕ ಅಜ್ಮೀರ್ ಮೌಲಿದ್ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನಡೆಯಲಿದೆ. ಈ ಪವಿತ್ರ ಕಾರ್ಯಕ್ರಮವು ಸಯ್ಯದ್ ಝೈನುಲ್ ಅಬಿದೀನ್ ತಂಙಳ್ ಜಯನಗರ ಇವರ ದುಆ ಆಶೀರ್ವಾದಗಳೊಂದಿಗೆ ಆರಂಭವಾಗಲಿದೆ.

ಕಾರ್ಯಕ್ರಮದಲ್ಲಿ ಪಾಂಡಿ ಉಮ್ಮರ್ ಜಿಫ್ರಿ ತಂಙಳ್ ಕುಂಬಕ್ಕೋಡ್ ಖತೀಬರು ಉಪಸ್ಥಿತರಿದ್ದು ಆಶೀರ್ವಚನ ನೀಡಲಿದ್ದಾರೆ. ಅದರೊಂದಿಗೆ ಜಯನಗರ ಮುಅಲ್ಲಿಂ ಶಫೀಕ್ ಹಿಮಮಿ ಇವರ ಗೌರವಾನ್ವಿತ ಉಪಸ್ಥಿತಿಯಲ್ಲಿ ಈ ಮೌಲಿದ್ ಪಾರಾಯಣ ಜರುಗಲಿದೆ. ಕಾರ್ಯಕ್ರಮದ ಸಮಾರೋಪದ ನಂತರ ಸಾರ್ವಜನಿಕರಿಗೆ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.





