ಸುಳ್ಯ ನಗರದಲ್ಲಿ ಕಾರ್ಯಾಚರಿಸುತ್ತಿರುವ ಎಟಿಎಂ ಕೇಂದ್ರಗಳ ದುರವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಮಡುಗಟ್ಟಿರುವ ಆಕ್ರೋಶ ಇಂದು ನಿನ್ನೆಯದಲ್ಲ. ಮೆಷಿನ್ ಸಮಸ್ಯೆ, ದುಡ್ಡು ಹಾಕದಿರುವುದು, ಎಟಿಎಂ ಒಳಗೇ ಬೀದಿ ನಾಯಿ ಮಲಗಿರುವುದು ಹೀಗೇ ಹಿಂದೆ ಹಲವು ಸುದ್ದಿಗಳಾಗಿವೆ.

ಆದರೆ ನಿನ್ನೆ ರಾತ್ರಿ ಒಬ್ಬರು ಸುಳ್ಯ ಪೇಟೆಯ ಕರ್ನಾಟಕ ಬ್ಯಾಂಕ್ ಎ ಟಿ ಎಂ ಗೆ ತೆರಳಿದಾಗ ಫೋಟೊ ತೆಗೆದು ಹಾಕಿದ್ದಾರೆ. ಸ್ವಚ್ಚತೆ ಇಲ್ಲ, ಎಸಿಗಳು ಎರಡು ನೆಪಕ್ಕೆ ಇದೆ. ವಿಪರೀತ ಸ್ಮೆಲ್ಲು, ಇಲ್ಲಿ ಬಿದ್ದಿರುವ ಕಸದ ರಾಶಿ ನೋಡಿದರೆ ಎಷ್ಟು ದಿನಗಳಾದವೇನೋ ಈ ಎಟಿಎಂ ಕಡೆ ಅಧಿಕೃತರು ತಲೆ ಹಾಕದೇ ಎಂಬಂತಾಗಿದೆ.


ಇಷ್ಟು ಬಿಸಿಲು ಸೆಖೆ ಇರುವ ಸಮಯದಲ್ಲೂ ಇರುವ ಎರಡು ಎಸಿಗಳು ರಿಪೇರಿಯಾಗದೇ ನೆನೆಗುದಿಗೆ ಬಿದ್ದಿರುವುದು ಅಧಿಕೃತರ ಅಸಡ್ಡೆ ಮತ್ತು ಹೇಗಿದ್ದರೂ ನಡೆಯುತ್ತದೆ ಎನ್ನುವ ಉದ್ದಟತನ ಅಲ್ಲದೆ ಮತ್ತೇನೂ ಅಲ್ಲ.


