ಈ ವರ್ಷ ಪತ್ನಿ ಸಮೇತರಾಗಿ ಹಜ್ ನಿರ್ವಹಿಸಲು ಮಕ್ಕಾ ತೆರಳುತ್ತಿರುವ ಎಸ್ ವೈ ಎಸ್ ಸುಳ್ಯ ಝೋನ್ ಇದರ ಕಾರ್ಯಕಾರಿ ಸಮಿತಿ ಸದಸ್ಯರು,ಸುನ್ನತ್ ಜಮಾಅತಿನ ಹಲವಾರು ಸಂಘ ಸಂಸ್ಥೆಗಳ ನಾಯಕರಾದ ಉದ್ಯಮಿ ಲತೀಫ್ ಹರ್ಲಡ್ಕ ರವರನ್ನು ಸಮಿತಿ ವತಿಯಿಂದ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಝೋನ್ ಅಧ್ಯಕ್ಷರಾದ ಅಬ್ದುಲ್ ಲತೀಫ್ ಗೊನಡ್ಕ ಪ್ರತ್ಯೇಕ ಸ್ಥಳಗಳಲ್ಲಿ ನಾಡಿನ ಜನತೆಗೆ ಉಲಮಾ ಉಮರಾ ಕಾರ್ಯಕರ್ತರಿಗೆ ದುವಾ ಮಾಡಲು ವಸಿಯ್ಯತ್ ಮಾಡಿದರು.

ಸಭೆಯಲ್ಲಿ ಸಿದ್ದೀಕ್ ಬಿ.ಎ,ಆರಿಸ್ ಸಿ.ಎ, ರಝಾಕ್ ಆಲೆಕ್ಕಾಡಿ, ಸಿದ್ದೀಕ್ ಗೊನಡ್ಕ,ಲತೀಫ್ ಅಡ್ಕಾರ್, ಹನೀಫ್ ಮದನಿ, ಹಸೈನಾರ್ ಗುತ್ತಿಗಾರು, ನೌಶಾದ್ ಕೆರೆಮೂಲೆ ಉಪಸ್ಥಿತರಿದ್ದರು.




