ಅರಂತೋಡು ಅನ್ವಾರುಲ್ ಹುದಾ ನೂತನ ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ

ಅರಂತೋಡು ಅನ್ವರುಲ್ ಹುಧಾ ಯಂಗ್ ಮೆನ್ಸ್ ಅಸೋಸಿಯೇಷನ್ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಎಸ್. ಎಂ. ಅಬ್ದುಲ್ ಮಜೀದ್ ಅವರ ಅಧ್ಯಕ್ಷತೆಯಲ್ಲಿ ಏಪ್ರಿಲ್ 29ರಂದು ನಡೆಯಿತು. ಕಾರ್ಯದರ್ಶಿ ಪಸಿಲು ಅವರು ವರದಿ ವಾಚಿಸಿ, ಲೆಕ್ಕಪತ್ರಗಳನ್ನು ಮಂಡಿಸಿದರು. ಖತೀಬರಾದ ಬಹು ಆಸಿಫ್ ಅಝ್ಹರಿ ದುವಾ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಹಾಗೂ ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಭಾಗವಹಿಸಿದ್ದರು.

ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಟಿ. ಎಂ. ಶಾಹಿದ್ ತೆಕ್ಕಿಲ್, ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪಸಿಲು ಎ. ಆಯ್ಕೆಯಾದರು. ಉಪಾಧ್ಯಕ್ಷರಾಗಿ ಹಾಜಿ ಕೆ. ಯು. ಅಝರುದ್ದೀನ್, ಕೋಶಾಧಿಕಾರಿಯಾಗಿ ಸಂಶುದ್ದೀನ್ ಪೆಲ್ತಡ್ಕ ಮತ್ತು ಜೊತೆ ಕಾರ್ಯದರ್ಶಿಗಳಾಗಿ ಆಶಿಕ್ ಕುಕ್ಕುಂಬಳ ಹಾಗೂ ಸಂಶುದ್ದೀನ್ ಕ್ಯೂರ್ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಮುಜೀಬ್ ಅರಂತೋಡು, ಮುಝಮ್ಮಿಲ್ ಕುಕ್ಕುಂಬಳ, ಕಬೀರ್ ಸೆಂಟಿಯಾರ್, ಇಕ್ಬಾಲ್ ಬೆಳ್ಳಾರೆ, ಫರಾಝ್, ಹಫೀಜ್ ಕೋಡಂಕೇರಿ, ಮೊಹಮ್ಮದ್ ನವಾಝ್ ಅವರನ್ನು ನೇಮಿಸಲಾಯಿತು. ಸಲಹಾ ಸಮಿತಿ ಸದಸ್ಯರುಗಳಾಗಿ ಹಾಜಿ ಅಶ್ರಫ್ ಗುಂಡಿ, ಕೆ. ಎಂ. ಅಬೂಬಕ್ಕರ್ ಪಾರೆಕ್ಕಲ್, ಹಾಜಿ ಬದ್ರುದ್ದೀನ್ ಪಟೇಲ್ ಮತ್ತು ಹನೀಫ್ ಎ. ಅವರನ್ನು ಆಯ್ಕೆ ಮಾಡಲಾಯಿತು.

ಸಂಸ್ಥೆಗೆ 50 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಮುಂದಿನ ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.

Leave a Reply

Discover more from

Subscribe now to keep reading and get access to the full archive.

Continue reading