ಚಿಕ್ಕಮಗಳೂರು ತಾಲೂಕಿನ ಅರಳಗುಪ್ಪೆ ಗ್ರಾಮದಲ್ಲಿ ಅತ್ಯಂತ ಮನಕಲಕುವ ಘಟನೆ ನಡೆದಿದೆ. ಕೆರೆಯಲ್ಲಿ ಈಜುತ್ತಿದ್ದ ಬಾತುಕೋಳಿಯನ್ನು ಹಿಡಿಯಬೇಕೆಂಬ ಆಸೆಯಿಂದ ನೀರಿಗಿಳಿದ ನಾಲ್ವರು ಮುಗ್ಧ ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.




ಮೃತಪಟ್ಟ ಮಕ್ಕಳನ್ನು ಮಹಾದಿಯಾ, ಅರುನುಸ್, ನಾಯುಸ್ ಮತ್ತು ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ 5 ರಿಂದ 10 ವರ್ಷದೊಳಗಿನವರಾಗಿದ್ದಾರೆ. ಕೆರೆಯಲ್ಲಿ ಈಜುತ್ತಿದ್ದ ಬಾತುಕೋಳಿಯನ್ನು ಕಂಡು ಅದನ್ನು ಹಿಡಿಯುವ ಕುತೂಹಲದಿಂದ ಮಕ್ಕಳು ಕೆರೆಗೆ ಇಳಿದಿದ್ದಾರೆ. ಆದರೆ ನೀರಿನ ಆಳದ ಅರಿವಿಲ್ಲದೆ ನಾಲ್ವರೂ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ಅದೃಷ್ಟವಶಾತ್ ಅರ್ಮಾನ್ ಎಂಬ ನಾಲ್ಕು ವರ್ಷದ ಪುಟ್ಟ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆಟವಾಡಿಕೊಂಡಿರಬೇಕಾದ ಪುಟ್ಟ ಮಕ್ಕಳು ಈ ರೀತಿ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಿಸಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

