ಗುಂಡ್ಲುಪೇಟೆ ವಾಹನಾಪಘಾತ: ಮೂವರು ಸಾವು

ಗುಂಡ್ಲುಪೇಟೆಯಲ್ಲಿ ವಾಹನಾಪಘಾತ ಸಂಭವಿಸಿದ ಬಗ್ಗೆ ವರದಿಯಾಗಿದ್ದು ಮೂವರು ಕೇರಳದ ಕಣ್ಣೂರಿನ ಮಂದಿ ಮೃತಪಟ್ಟಿದ್ದಾಗಿ ವರದಿಯಾಗಿದೆ .

ಊಟಿಗೆ ತೆರಳುತ್ತಿದ್ದ ಏಳು ಜನರು ಇದ್ದ ಕಾರ್ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಮುನೀರ್ (45), ಮುನೀರ (30) ಮತ್ತು  ಸಿದಾನ್ ಎಂಬ ಮೂರೂವರೆ ವರ್ಷದ ಮಗು ಮೃತಪಟ್ಟವರು. ಇನ್ನೊಂದು ಮಗುವಿನ ಸ್ಥಿತಿ ಗಂಭೀರ ಇರುವುದಾಗಿ ತಿಳಿದು ಬಂದಿದೆ.

Leave a Reply

Discover more from

Subscribe now to keep reading and get access to the full archive.

Continue reading