ಇಂಥಾ ಟ್ವಿಸ್ಟ್ ಸಿನಿಮಾದಲ್ಲೂ ಇರದು: ಆತನ ಸುಳ್ಳು ಬಯಲಾದ ಕಥೆ

ಆ  ಸುಂದರ ಸಂಸಾರದಲ್ಲಿ ನಗು, ನಲಿವು ಎಲ್ಲವೂ ಇತ್ತು. ಆತ ಸದಾ ಕೆಲಸದ ಒತ್ತಡದಲ್ಲಿದ್ದರೂ ಪತ್ನಿಯ ಮೇಲೆ ಅತೀವ ಪ್ರೀತಿ ತೋರಿಸುತ್ತಿದ್ದ. ಒಂದು ದಿನ ಆತ “ಕಂಪನಿಯ ತುರ್ತು ಕೆಲಸದ ಮೇಲೆ ದೂರದ ಊರಿಗೆ ಹೋಗಬೇಕಿದೆ, ಬರಲು ಎರಡು ದಿನವಾಗಬಹುದು” ಎಂದು ಪತ್ನಿಗೆ ಹೇಳಿ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಯಿಂದ ಹೊರಟನು. ಪತ್ನಿ ಕೂಡ ಆತನ ಕೆಲಸಕ್ಕೆ ಶುಭ ಹಾರೈಸಿ ಕಳುಹಿಸಿಕೊಟ್ಟಳು.

ಆತ ಹೋದ ಮೇಲೆ ಮನೆಯಲ್ಲಿ ಒಂಟಿಯಾಗಿದ್ದ ಪತ್ನಿ ಸದಾ ಆತನ ಫೋನಿಗಾಗಿ ಕಾಯುತ್ತಿದ್ದಳು. ನೆಟ್‌ವರ್ಕ್ ಸಮಸ್ಯೆ ಇರಬಹುದು ಎಂದು ಸುಮ್ಮನಾಗುತ್ತಿದ್ದಳು. ಆದರೆ ಅಂದು ಸಂಜೆ ಆಕೆಯ ಮೊಬೈಲ್‌ಗೆ ಒಂದು ಅನಿರೀಕ್ಷಿತ ಸಂದೇಶ ಬಂತು. ಅದು ಯಾವುದೋ ಇಲಾಖೆಯಿಂದ ಬಂದ ನೋಟಿಸ್‌ನಂತಿತ್ತು. ಆಕೆ ಕುತೂಹಲದಿಂದ ಆ ಸಂದೇಶದಲ್ಲಿದ್ದ ಲಿಂಕ್ ಅನ್ನು ಒತ್ತಿದಳು. ಅಲ್ಲಿ ಒಂದು ಫೋಟೋ ಇತ್ತು.

ಆ ಫೋಟೋವನ್ನು ನೋಡಿದ ಕೂಡಲೇ ಆಕೆಯ ಕಾಲ ಕೆಳಗಿನ ಭೂಮಿ ಜಾರಿದಂತಾಯಿತು. ಅದು ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದ್ದ ಚಿತ್ರ. ಆತನ ಪತ್ನಿ ಹೆಸರಲ್ಲಿ ಕಾರಿದ್ದ ಕಾರಣ ಆಕೆಯ ನಂಬರಿಗೇ ಸಂದೇಶ ಬಂದಿತ್ತು.  ಫೋಟೋದಲ್ಲಿ ಆಕೆಯ ಪತಿ ಕಾರು ಚಲಾಯಿಸುತ್ತಿದ್ದ. ಆದರೆ ಆತ ಹೇಳಿದ ಊರಿನಲ್ಲಲ್ಲ, ಬದಲಾಗಿ ಅದೇ ನಗರದ ಬೆಂಗಳೂರಿನ ರಸ್ತೆಯೊಂದರಲ್ಲಿ ಆತ ತನ್ನ ಕಾರಿನಲ್ಲಿದ್ದ. ಅಷ್ಟೇ ಆಗಿದ್ದರೆ ಬಹುಶಃ ಆಕೆ ಅಷ್ಟು ಆತಂಕಕ್ಕೊಳಗಾಗುತ್ತಿರಲಿಲ್ಲವೇನೋ. ಆದರೆ ಆ ಫೋಟೋದಲ್ಲಿ ಆತನ ಪಕ್ಕದ ಸೀಟಿನಲ್ಲಿ ಮತ್ತೊಬ್ಬ ಮಹಿಳೆ ಕುಳಿತಿದ್ದಳು. ಆತ ಸೀಟ್ ಬೆಲ್ಟ್ ಹಾಕದ ಕಾರಣ ಕ್ಯಾಮೆರಾ ಆತನ ಮುಖವನ್ನು ಸ್ಪಷ್ಟವಾಗಿ ಸೆರೆಹಿಡಿದಿತ್ತು.

ಆ ಸಣ್ಣ ಸಂಚಾರಿ ನಿಯಮದ ಉಲ್ಲಂಘನೆ, ಆತ ಹೆಣೆದಿದ್ದ ಸುಳ್ಳಿನ ಬಲೆಯನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿತ್ತು. ಕೆಲಸದ ನೆಪ ಹೇಳಿ ಹೊರಟವನು ತನ್ನ ಪ್ರೇಯಸಿಯ ಜೊತೆ ಸುತ್ತಾಡುತ್ತಿದ್ದ ವಿಚಾರ ಅಂದು ಬಯಲಿಗೆ ಬಂದಿತ್ತು. ಪತ್ನಿ ಅಳುತ್ತಾ ಕೂರಲಿಲ್ಲ. ಬದಲಾಗಿ ಆ ಫೋಟೋವನ್ನೇ ಸಾಕ್ಷಿಯಾಗಿರಿಸಿಕೊಂಡು ನ್ಯಾಯಾಲಯದ ಮೆಟ್ಟಿಲೇರಿದಳು. ತನ್ನನ್ನು ನಂಬಿಸಿ ವಂಚಿಸಿದ ಪತಿಗೆ ಆ ಫೋಟೋ ಮೂಲಕವೇ ಸರಿಯಾದ ಪಾಠ ಕಲಿಸಿ, ಕಾನೂನು ಹೋರಾಟದಲ್ಲಿ ಜಯ ಸಾಧಿಸಿದಳು. ರಸ್ತೆಯಲ್ಲಿ ಮಾಡಿದ ಒಂದು ಸಣ್ಣ ತಪ್ಪು, ಆತನ ಜೀವನದ ಅತಿದೊಡ್ಡ ರಹಸ್ಯವನ್ನು ಪತ್ನಿಯ ಮುಂದೆ ತೆರೆದಿಟ್ಟಿತು. ನಿಜ ಜೀವನದಲಿ ಸಂಭವಿಸುವ ಒಂದೊಂದು ತಿರುವುಗಳು ಸಿನೆಮಾಗಳ ಟ್ವಿಸ್ಟ್ ಗಳಿಗಿಂತಲೂ ರೋಚಕ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.

Leave a Reply

Discover more from

Subscribe now to keep reading and get access to the full archive.

Continue reading