

ಮಹಿಳಾ ಮಿಸಲಾತಿ : ಪ್ರತಿಭಟನೆಯ ನಾಟಕವಾಡುತ್ತಿರುವ ಬಿಜೆಪಿಯವರಲ್ಲಿ ಜಾನಿ ಕೆಪಿ ಅವರು ಕೇಳುತ್ತಿರುವ ಕೆಲವು ಪ್ರಶ್ನೆಗಳು
2023 ರಲ್ಲೇ ಸರ್ವ ಪಕ್ಷಗಳೂ ಒಕ್ಕೋರಲಿನಿಂದ ಅನುಮೊದಿಸಿದ ಮಹಿಳಾ ಮೀಸಲು ಮಸೂದೆ ಮತ್ತೆ ಮಂಡಿಸಲು ಕಾರಣವೇನು ?
ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಬೆಂಬಲದೊಂದಿಗೇ ಆರ್ಟಿಕಲ್ 334 A ತಿದ್ದುಪಡಿಯೊಂದಿಗೆ 2023 ಸೆಪ್ಟೆಂಬರ್ 19 ರಂದು ಮಂಡಿಸಲ್ಪಟ್ಟು 2023 ಸೆಪ್ಟೆಂಬರ್ 20 ರಂದು ಲೋಕಸಭೆಯಲ್ಲೂ 2023 ಸೆಪ್ಟೆಂಬರ್ 21 ರಲ್ಲಿ ರಾಜ್ಯಸಭೆಯಲ್ಲೂ ಅಂಗೀಕಾರಗೊಂಡು 2023 ರ ಸೆಪ್ಟೆಂಬರ್ 29 ರಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳ ಅಂಕಿತ ಬಿದ್ದು ಕಾಯ್ದೆಯಾದ ಮಹಿಳಾ ಮೀಸಲಾತಿ ವಿಷಯವನ್ನು ಈಗ ವಿವಾದವಾಗಿಸಲು ಕಾರಣವೇನು ?




ಮಹಿಳೆಯರ ಮೇಲೆ ಪ್ರೀತಿಯಿದೆಯೆಂದು ಸ್ವಂತ ಬೆನ್ನು ತಾವೇ ತಟ್ಟಿಕೊಳ್ಳುತ್ತಿರುವ ಬಿಜೆಪಿ ಪ್ರಸ್ತುತ ಇರುವ 543 ಸೀಟುಗಳಿಗೆ ಈ ಕಾಯ್ದೆ ಅಳವಡಿಸುವ ಪ್ರಯತ್ನ ಯಾಕೆ ಮಾಡಲಿಲ್ಲ ?
ಡೀಲಿಮಿಟೇಷನ್ ಎನ್ನುವ ವಿಷಯ ವಿವಾದಾತ್ಮಕವಾಗಿದ್ದು ಇದು ದಕ್ಷಿಣ ಭಾರತೀಯರನ್ನು ರಾಜಕೀಯವಾಗಿ ಗುಲಾಮರನ್ನಾಗಿ ಬಳಸುವ ವಿವಾದಾತ್ಮಕ ಕಾಯ್ದೆ ಎನ್ನುವ ವಿವಾದಗಳಿರುವಾಗಲೇ ಮಹಿಳಾ ಮೀಸಲಾತಿ ಎನ್ನುವ ಹಾಲಿಗೆ ವಿವಾದಾತ್ಮಕ ಡೀಲಿಮಿಟೇಷನ್ ಎನ್ನುವ ವಿಷವನ್ನು ಬೆರೆಸುವ ಪ್ರಯತ್ನ ಮಾಡಿದ್ದು ಯಾಕೆ ?
ಒಂದು ವೇಳೆ ಮತ್ತೊಮ್ಮೆ ಮಹಿಳಾಮೀಸಲಾತಿ ಮಸೂದೆ ಮಂಡಿಸಬೇಕಿದ್ದರೆ ಅದನ್ನು ಪ್ರತ್ಯೇಕವಾಗಿ ಮಂಡಿಸುವ ಪ್ರಯತ್ನ ಯಾಕೆ ಮಂಡಿಸಲಿಲ್ಲ ? ಹಾಗಾಗುತ್ತಿದ್ದರೆ ಹಿಂದೆ ಯಾವ ವಾದವಿವಾದಗಳೂ ಇಲ್ಲದೆ ಅಂಗೀಕಾರಗೊಂಡ ಕಾಯ್ದೆಯನ್ನು ಮಹಿಳಾ ಮೀಸಲಾತಿ ಎನ್ನುವ ವಿಶೇಷ ಮತ್ತು ಅತೀ ಅಗತ್ಯವಾದ ಕಾಯ್ದೆಯನ್ನು ಕಾಂಗ್ರೆಸ್ ವಿರೋಧಿಸುತ್ತಿತ್ತೇ ?
ಉಳಿದೆಲ್ಲಾ ಮಸೂದೆಗಳನ್ನು ಪಾಸ್ ಮಾಡಿಕೊಂಡಂತೆ 2014 ಮತ್ತು 2019 ರಲ್ಲೇ ಯಾಕೆ ಜಾರಿಗೆ ತರಲು ಪ್ರಯತ್ನಿಸಲಿಲ್ಲ. ?
ಮಹಿಳೆಯರ ಪರವಾಗಿದ್ದೇವೆ ಎನ್ನುವ ನರೇಂದ್ರ ಮೋದಿಯವರು ಮಣಿಪುರದಲ್ಲಿ ಭಾರತೀಯ ಮಹಿಳೆಯನ್ನು ಅತ್ಯಾಚಾರಕ್ಕೀಡುಮಾಡಿ ಬೆತ್ತಲುಗೊಳಿಸಿ ಮೆರವಣಿಗೆ ನಡೆಸಿದ ಬಗ್ಗೆ ಕನಿಷ್ಟ ವಿಷಾದವನ್ನಾದರೂ ಯಾಕೆ ವ್ಯಕ್ತಪಡಿಸಿಲ್ಲ ?
ಕಥೂವಾ ಉನ್ನಾವ್ ಗಳಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಗೈಯ್ಯಲ್ಪಟ್ಟ ಮಹಿಳೆಯರ ಬಗ್ಗೆ ಹೆಸರಿಗಾದರೂ ಒಂದು ಮಾತನಾಡಿದ್ದು ಇದೆಯೇ ? ಇವರು ಮಹಿಳೆಯರು ಎನ್ನುವ ವಿಷಯದಲ್ಲಿ ಬಿಜೆಪಿಯವರಿಗೇನಾದರೂ ಸಂಶಯವಿದೆಯೇ ?
ಸರಣಿ ಅತ್ಯಾಚಾರಕ್ಕೀಡಾದ ಬಿಲ್ಕೀಸ್ ಬಾನು ಎನ್ನುವ ಮಹಿಳೆಯ ಪ್ರಕರಣದ ಅಪರಾಧಿಗಳೆಂದು ಭಾರತದ ಸರ್ವೋಚ್ಚ ನ್ಯಾಯಾಲಯ ಘೋಷಿಸಿದ ಆರೋಪಿಗಳು ಜಾಮೀನು ಸಿಕ್ಕಿ ಹೊರಬಂದಾಗ ಅವರನ್ನು ವಿಶೇಷ ಸಾಧನೆ ಮಾಡಿದವರಂತೆ ಪಟಾಕಿ ಸಿಡಿಸಿ ಹಾರ ತುರಾಯಿಗಳೊಂದಿಗೆ ಸ್ವಾಗತಿಸಿದ ಬಿಜೆಪಿ ನಾಯಕರನ್ನು ಪಕ್ಷದಿಂದ ಹೊರಹಾಕುವ ಕೆಲಸ ಯಾಕೆ ಮಾಡಲಿಲ್ಲ ?
ಮೇಲ್ತಿಳಿಸಿದ ಪ್ರಕರಣಗಳಲ್ಲಿ ಭಾಗಿಯಾದ ಬಿಜೆಪಿ ನಾಯಕರ ಬಗ್ಗೆ ಎಷ್ಟು ಪ್ರತಿಭಟನೆ ಮತ್ತು ಯಾವ ಶಿಸ್ತು ಕ್ರಮ ಕೈಗೊಂಡಿದ್ದೀರಿ ?
ಸುಳ್ಯದ ಬಿಜೆಪಿ ಈಮೇಲಿನ ಮಹಿಳೆಯರ ವಿರುದ್ದ ನಡೆದ ಅತ್ಯಾಚಾರ ಕೊಲೆ ದೌರ್ಜನ್ಯಗಳ ವಿರುದ್ದ ಎಷ್ಟು ಪ್ರತಿಭಟನೆಗಳನ್ನು ಆಯೋಜಿಸಿದ್ದೀರಿ ?
ಈಯೆಲ್ಲಾ ಪ್ರಕರಣಗಳಲ್ಲಿಯೂ ಸ್ತ್ರೀವಿರೋಧಿಯಾಗಿ ನಡಕೊಂಡ ಬಿಜೆಪಿ ಮಾಡುತ್ತಿರುವ ನಾಟಕ ಇವತ್ತು ಸಾಮಾನ್ಯ ಜನರೂ ಅರ್ಥಮಾಡಿಕೊಂಡಿದ್ದು ಮುಂದಿನ ದಿನಗಳಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿಯ ಮುಖ್ಯಸಂಯೋಜಕರಾದ ಕೆ.ಪಿ ಜಾನಿಯವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿರುತ್ತಾರೆ.

