ಸಾಲ್ಮರ ಶರಫುದ್ದೀನ್ ತಂಙಳ್ ನಿಧನ

ಪುತ್ತೂರಿನ‌ ಆಧ್ಯಾತ್ಮಿಕ ನೇತಾರರಾದ ಬಹುಮಾನ್ಯರಾದ ಸಾಲ್ಮರ ಶರಫುದ್ದೀನ್ ತಂಙಳ್ ರವರು ನಿಧನರಾಗಿದ್ದಾರೆ.

ಸಾಲ್ಮರ ದಾರುಲ್ ಹಸನಿಯ್ಯ ಹಿಫ್ಲ್ ಕಾಲೇಜಿನ‌ ಸ್ಥಾಪಕರಾದ ಸಯ್ಯದ್ ಹಾದೀ ಶರಫುದ್ದೀನ್ ತಂಙಳ್ ರನ್ನು ಹೃದಯಾಘಾತದ ಕಾರಣ ಪುತ್ತೂರಿನ‌ ಮೆಡ್ ಲಾಂಡ್ ಆಸ್ಪತ್ರೆಗೆ ದಾಖಲಿಸಿದ್ದು  ನಂತರ ಮಂಗಳೂರಿಗೆ ಕರೆದೊಯ್ದಿದ್ದು ಚಿಕಿತ್ಸೆ ಫಲಕಾರಿಯಾಗದೇ 3.30 ರ ಹೊತ್ತಿಗೆ ಕೊನೆಯುಸಿರೆಳೆದಿರುವುದಾಗಿ ತಿಳಿದು ಬಂದಿದೆ.

ಮಧ್ಯಾಹ್ನ ಳುಹರ್ ನಮಾಜ್ ಗೆ ಮೊದಲೇ ದಫನ ಕಾರ್ಯ ನಡೆಯಲಿದೆ ಎಂದು ತೀರ್ಮಾನ ಆಗಿದೆ ಎನ್ನಲಾಗಿದೆ. ನಂತರ ಬದಲಾವಣೆ ಏನಾದರೂ ಆಗಿದೆಯೇ ಎಂದು ತಿಳಿಯಬೇಕಷ್ಟೇ.

ಮುಗುಳ್ನಗು ಮತ್ತು ಸಾಂತ್ವನಸ್ಪರ್ಶದ ಮೂಲಕ  ದಶಕಗಳಿಂದ ಪುತ್ತೂರಿನ‌ ಜನರ ಪಾಲಿನ ನಂದಾದೀಪವಾಗಿದ್ದ  ದಿವ್ಯ ಪ್ರಭೆಯೊಂದು ನಂದಿ ಹೋಗಿದೆ.

Leave a Reply

Discover more from

Subscribe now to keep reading and get access to the full archive.

Continue reading